ಬೆಂಗಳೂರು:- ರಕ್ತ ಚಂದ್ರಗ್ರಹಣಕ್ಕೆ ದಿನಗಣನೆ ಶುರುವಾಗಿದ್ದು, ನಾಳೆ ಕರ್ನಾಟಕದ ಪ್ರಸಿದ್ಧ ದೇವಾಲಯಗಳು ಬಂದ್ ಆಗಲಿದೆ.
ಗ್ರಹಣದ ವೇಳೆ ನಮ್ಮಲ್ಲಿ ಗ್ರಹಗತಿಗಳ ಬದಲಾವಣೆ ಆಗುತ್ತೆ ಅನ್ನೋ ನಂಬಿಕೆ ದಟ್ಟವಾಗಿದೆ. ಅದೇ ರೀತಿ ಗ್ರಹಣದ ದಿನ ದೇವರಿಗೂ ದರ್ಬೆಯಿಂದ ದಿಗ್ಬಂಧನ ಮಾಡಲಾಗುತ್ತದೆ. ಚಂದ್ರಗ್ರಹಣದ ಪ್ರಭಾವ ದೇವಾಲಯದ ಮೇಲೆ ಬೀರಬಾರದು ಎಂಬ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳ ದರ್ಶನದ ಅವಧಿ ಬದಲಾಗಲಿದೆ. ಗ್ರಹಣ ಆರಂಭಕ್ಕೂ ಮುನ್ನವೇ ಬೆಂಗಳೂರಿನ ಬಹುತೇಕ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ.
ಯಾವ್ಯಾವ ದೇವಾಲಯ ಮುಚ್ಚಿರುತ್ತೆ?
* ಮೈಸೂರಿನ ಚಾಮುಂಡಿ ದೇವಾಲಯ ರಾತ್ರಿ 9:30ಕ್ಕೆ ಬಂದ್.
* ಚಿಕ್ಕಬಳ್ಳಾಪುರದ ಘಾಟಿ ಸುಬ್ರಮಣ್ಯ ಗುಡಿ ಸಂಜೆ 4ಕ್ಕೆ ಬಂದ್.
* ಕೊಪ್ಪಳದ ಹುಲಗೆಮ್ಮ ದೇವಾಲಯ ಸಂಜೆ 5 ಗಂಟೆಗೆ ಬಂದ್.
* ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟ ಸಂಜೆ 5ಕ್ಕೆ ಕ್ಲೋಸ್.
* ಬೇಲೂರಿನ ಚನ್ನಕೇಶವ ದೇವಸ್ಥಾನ ಮಧ್ಯಾಹ್ನ 3 ಗಂಟೆಗೆ ಮುಚ್ಚುತ್ತದೆ.
* ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಂಜೆ 5ಕ್ಕೆ ಕ್ಲೋಸ್.
* ಧರ್ಮಸ್ಥಳದ ಮಂಜುನಾಥ ದೇವಾಲಯ ಸಂಜೆ 7 ಗಂಟೆಗೆ ಬಂದ್.
* ಮಂಗಳೂರಿನ ಕದ್ರೋಳಿ ದೇವಾಲಯ ರಾತ್ರಿ 8 ಗಂಟೆಗೆ ಕ್ಲೋಸ್.
* ಮಂಗಳೂರಿನ ಕದ್ರಿ ದೇವಾಲಯ ಸಂಜೆ 6.30ಕ್ಕೆ ಬಂದ್.
* ಬೆಂಗಳೂರಿನ ಗಾಳಿ ಆಂಜನೇಯ ಮಧ್ಯಾಹ್ನ 3 ಗಂಟೆಗೆ ಬಂದ್.
* ಬೆಂಗಳೂರಿನ ಮೆಜೆಸ್ಟಿಕ್ನಲ್ಲಿನ ಅಣ್ಣಮ್ಮ ದೇವಾಲಯ 8ಕ್ಕೆ ಬಂದ್.
* ಆರ್ಆರ್ ನಗರದ ರಾಜರಾಜೇಶ್ವರಿ ದೇವಾಲಯ ರಾತ್ರಿ 8ಕ್ಕೆ ಬಂದ್.
* ಬೆಂಗಳೂರಿನ ಬನಶಂಕರಿ ದೇವಸ್ಥಾನ ಸಂಜೆ 6ಕ್ಕೆ ಬಂದ್.
* ಗವಿ ಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 11 ಗಂಟೆಗೆ ಬಂದ್.
* ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ 12.20ಕ್ಕೆ ಬಂದ್.
* ಮಲ್ಲೇಶ್ವರದ ಪ್ರಸಿದ್ಧ ಗಂಗಮ್ಮ ದೇವಾಲಯ ಸಂಜೆ 7 ಗಂಟೆಗೆ ಕ್ಲೋಸ್.
* ಚಾಮರಾಜಪೇಟೆಯ ಬಂಡೆ ಮಹಾಕಾಳಿ ರಾತ್ರಿ 7.30ಕ್ಕೆ ಬಂದ್.
* ಕುದ್ರೋಳಿ ದೇಗುಲ (ಮಂಗಳೂರು) ರಾತ್ರಿ 8 ಗಂಟೆಗೆ ಬಂದ್.
* ಕದ್ರಿ ದೇಗುಲ (ಮಂಗಳೂರು) ಸಂಜೆ 6.30 ಗಂಟೆಗೆ ಬಂದ್.
* ಘಾಟಿ ಸುಬ್ರಹ್ಮಣ್ಯ (ಚಿಕ್ಕಬಳ್ಳಾಪುರ) ಸಂಜೆ 4.00 ಗಂಟೆಗೆ ಬಂದ್.
* ಮಹಾಬಲೇಶ್ವರ ದೇವಸ್ಥಾನ (ಗೋಕರ್ಣ) ಮಧ್ಯಾಹ್ನ 12.30 ಗಂಟೆಗೆ ಬಂದ್.
* ಚನ್ನಕೇಶವ ದೇಗುಲ (ಬೇಲೂರು) ಮಧ್ಯಾಹ್ನ 3 ಗಂಟೆಗೆ ಬಂದ್.
* ಚಲುವನಾರಾಯಣಸ್ವಾಮಿ, (ಮೇಲುಕೋಟೆ) ಮಧ್ಯಾಹ್ನ 1:00 ಗಂಟೆಗೆ ಬಂದ್.