ಸೋಮೇಶ್ವರ ಇಂಡಸ್ಟ್ರೀಸ್‌ನಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಆರೋಗ್ಯ ಶಿಬಿರ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಹಾಗೂ ಕಂಪಾನಿಯೋ ಸಂಸ್ಥೆ ಇವರ ಸಹಯೋಗದಲ್ಲಿ ಇಲ್ಲಿನ ಪಟ್ಟಣದ ಸೋಮೇಶ್ವರ ಇಂಡಸ್ಟ್ರೀಸ್‌ನಲ್ಲಿ ಶುಕ್ರವಾರ ಉಚಿತ ಫೂಟ್ ಪಲ್ಸ್ ಥೆರಪಿ ಆರೋಗ್ಯ ಶಿಬಿರ ಜರುಗಿತು.

Advertisement

ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಶಿಬಿರ ಉದ್ಘಾಟಿಸಿ ಮಾತನಾಡಿ, ಯಾವುದೇ ರೀತಿಯ ನರ ರೋಗಗಳಿಗೆ ಸೆ.5ರಿಂದ 17ರವರೆಗೆ ಉಚಿತ ಫೂಟ್ ಫಲ್ಸ್ ಥೆರಪಿ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಇದೇ ಚಿಕಿತ್ಸೆ ಪಡೆಯಲು ದೂರದ ಹುಬ್ಬಳ್ಳಿಗೆ ಹೋಗಬೇಕಾಗುತ್ತದೆ. ಇದರಿಂದ ಬಡವರಿಗೆ ಆರ್ಥಿಕ ಹೊರೆ ಮತ್ತು ಸಮಯದ ಅಭಾವ ಆಗುತ್ತಿತ್ತು. ಕಾರಣ ಬಡ ರೋಗಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಲಕ್ಷ್ಮೇಶ್ವರದಲ್ಲಿಯೇ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ನರರೋಗ, ಮೊಣಕಾಲು ನೋವು ಇದ್ದವರು ಶಿಬಿರಕ್ಕೆ ಬಂದ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ತಿಳಿಸಿದರು.

ಕಂಪಾನಿಯೋ ಸಂಸ್ಥೆಯ ವೈದ್ಯ ನಾಗರಾಜ ಮಾತನಾಡಿ, ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಔಷಧಿರಹಿತವಾಗಿ ಅಡ್ಡ ಪರಿಣಾಮ ಇಲ್ಲದೆ ನಿವಾರಿಸುವ ಒಂದು ವಿಶೇಷ ಪದ್ಧತಿ ಇದಾಗಿದೆ. ಅರ್ಧ ಗಂಟೆ ಚಿಕಿತ್ಸೆ ಪಡೆದಾಗ ನಮ್ಮ ದೇಹದಲ್ಲಿ 5 ಕಿಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಆಗುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಾದ್ಯಂತ 350 ಶಾಖೆಗಳನ್ನು ತೆರೆಯಲಾಗಿದ್ದು, ಈವರೆಗೆ 50 ಲಕ್ಷಕ್ಕಿಂತ ಹೆಚ್ಚು ಜನರು ಜನರು ಪರಿಹಾರ ಕಂಡುಕೊಂಡಿದ್ದಾರೆ ಎಂದು ಹೇಳಿದರು.

ಚನ್ನಪ್ಪ ಕೋಲಕಾರ ಮಾತನಾಡಿದರು. ಈ ವೇಳೆ ಬಸವ ಯೋಗ ಸಮಿತಿಯ ನಾಗರಾಜ ಸೂರಣಗಿ, ಎನ್.ವಿ. ಹೇಮಗಿರಿಮಠ, ನೀಲಪ್ಪ ಕರ್ಜೆಕಣ್ಣವರ, ಫಕ್ಕೀರಪ್ಪ ಕೊಂಕದ, ಶೇಕಪ್ಪ ಡಂಬಳ, ಐ.ಎಸ್. ಮಡಿವಾಳರ, ಈಶ್ವರಪ್ಪ

ಚಂಬಣ್ಣ ಬಾಳಿಕಾಯಿ ಮಾತನಾಡಿ, ಯಾವುದೇ ಖರ್ಚು ಇಲ್ಲದೆ ಶಿಬಿರದಲ್ಲಿ ನರರೋಗಗಳಿಗೆ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ಶಿಬಿರದ ಲಾಭ ಪಡೆದುಕೊಳ್ಳಬೇಕು’ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here