ಮಂಡ್ಯ:- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತಾಲಿಬಾನ್ ಆಡಳಿತ ಮಾಡುತ್ತಿದೆ ಎಂದು ಹೇಳುವ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮದ್ದೂರಿನ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ಇದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಾರೆ. ಅದಕ್ಕಾಗಿ ಇವರು ಬಾಲ ಬಿಚ್ಚಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾಲಿಬಾನ್ ಆಡಳಿತ ಮಾಡುತ್ತಿದೆ. ಮುಸಲ್ಮಾನರು ಶಾಂತಿಪ್ರಿಯರು ಅಂತಾರೆ. ಮಸೀದಿಯಲ್ಲಿ ಕಲ್ಲಿಟ್ಟುಕೊಂಡು ಹೊಡೆದಿದ್ದಾರೆ, ಇವರು ಶಾಂತಿ ಪ್ರಿಯರಾ? ನಾಗಮಂಗಲ ಆಯ್ತು, ಮದ್ದೂರಿಗೆ ಈ ಪರಿಸ್ಥಿತಿ ಬಂದಿದೆ. ಇಲ್ಲಿ ಹುಟ್ಟಿ, ಬೆಳೆದು ಗಡಿಯಾಚೆಗೆ ನಿಷ್ಠೆಯಿಟ್ಟುಕೊಂಡವರು ಕಲ್ಲು ತೂರುತ್ತಾರೆ ಎಂದು ಕಿಡಿಕಾರಿದರು.
ಮಸೀದಿ ಒಳಗೆ ಕಲ್ಲು ಹೇಗೆ ಹೋಯ್ತು? ಮುಲ್ಲ ಯಾವನು? ಕಲ್ಲು ಹೊಡೆದವರು ಅರೆಸ್ಟ್ ಆಗಬೇಕು. ಹೆಣ್ಣುಮಕ್ಕಳ ಮೇಲೆ ಲಾಠಿ ಬೀಸಿದ ಪೊಲೀಸರು ಸಸ್ಪೆಂಡ್ ಆಗಬೇಕು. ಆತ್ಮರಕ್ಷಣೆಗಾಗಿ ಹಿಂದೂಗಳು ತಿರುಗಿ ಬೀಳುತ್ತಾರೆ. ನೂರಾರು ವರ್ಷ ಆಕ್ರಮಣ ನಡೆದರೂ 80% ಹಿಂದೂಗಳಿದ್ದಾರೆ. ಹಿಂದೂಗಳು ಕಲ್ಲು ಬಿಸಾಡಲ್ಲ, ಕಲ್ಲು ಬಿಸಾಡಿದ್ರೆ ಬಿಡಲ್ಲ. ಕಲ್ಲು ಬೀಸಿದ ಮಸೀದಿ ಬಾಗಿಲು ಮುಚ್ಚಿಸಿ ಎಂದು ಒತ್ತಾಯಿಸಿದರು.


