ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಲಕ್ಷ್ಮೇಶ್ವರ ೨೧ ಟನಗರ ಘಟಕದಿಂದ ಸ್ವಯಂ ಸೇವಕರು ಭಾನುವಾರ ಪಟ್ಟಣದಲ್ಲಿನ ಅಂಬೇಡ್ಕರ ನಗರ, ತೇರಿನ ಮನೆ, ಸೊಪ್ಪಿನಕೆರಿ, ಹಾವಳಿ ಆಂಜನೇಯ, ಬಸ್ತಿಬಣದ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳಿಗೆ ತೆರಳಿ ಗಣೇಶ/ಗಜ ವಂದನೆ ಸಲ್ಲಿಸಿದರು.
ಗಣವೇಷಧಾರಿ ಸ್ವಯಂ ಸೇವಕರು ಘೋಷ ಸಹಿತ ಪಥಸಂಚಲನದ ಮೂಲಕ ಗಜವಂದನೆ ಸಲ್ಲಿಸಲು ಆಗಮಿಸುವ ಮಾರ್ಗವನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿದ್ದರು. ಕೇಸರಿ ಧ್ವಜ ಕಟ್ಟಿ ಸ್ವಯಂ ಸೇವಕರನ್ನು ಸ್ವಾಗತಿಸಲಾಗಿತ್ತು.



