ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್ ಸಂಸ್ಥೆಯ 2025ನೇ ಸಾಲಿನ ಚುನಾವಣೆಯಲ್ಲಿ ಗದಗ ನಗರದ ಮಕ್ತುಮಹುಸೇನ್ ಖಾನ್ ಜಮಾದಾರ ತಮ್ಮ ಸ್ನೇಹಬಳಗದ ಜೊತೆ ಸ್ವತಂತ್ರ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರವನ್ನು ವಕ್ಫ್ ಇಲಾಖೆಯಲ್ಲಿ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಮಕ್ತುಮಹುಸೇನ ಖಾನ ಜಮಾದಾರ ಮಾತನಾಡಿ, ನಾನು ಆಯ್ಕೆಯಾದಲ್ಲಿ ಅಂಜುಮನ್ ಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿ ಮಾಡುವೆ. ಮುಸ್ಲಿಂ ಸಮಾಜ ಬಾಂಧವರು ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸಬಲರಾಗಲು ಪ್ರಾಮಾಣಿಕವಾಗಿ ದುಡಿಯುವೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಫಾರೂಕ ಹುಬ್ಬಳ್ಳಿ, ಮುಜಮಿಲ್ ಬಳ್ಳಾರಿ, ಮುನ್ನಾ ಕಾಗದಗಾರ, ಇಲಿಯಾಸ್ ಶಿರಹಟ್ಟಿ, ಅನ್ವರ್ ಶಿರಹಟ್ಟಿ, ಮಹಮ್ಮದಅಲಿ ಡಾಲಾಯತ್, ನೂರಅಹ್ಮದ ಕಟ್ಟಿಮನಿ, ಜಾಫರ ಡಾಲಾಯತ್, ಮಜಹರ ಪೀರಜಾದೆ, ಜಬ್ಬಾರಖಾನ ಜಮಾದಾರ, ಮಕ್ಸೂದ ಹೆಸರೂರ, ರಬ್ಬಾನಿ ಬನ್ನೂರ, ಶಹಬಾಜ ಮುಲ್ಲಾ, ಜಿಲಾನಿ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.