ಕಾರಿನ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶನ: ಗದಗ ನಗರ ಠಾಣೆಯಲ್ಲಿ ಸುಮೊಟೊ ಕೇಸ್ ದಾಖಲು!

0
Spread the love

ಗದಗ:- ಕಾರಿನ ಮೇಲೆ ಪಾಕ್ ಧ್ವಜ ಪ್ರದರ್ಶಿಸಿದ್ದು ಅಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಆರೋಪದ ಮೇಲೆ ಗದಗ ನಗರ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.

Advertisement

ಮಂಡ್ಯದಲ್ಲಿ ಕಲ್ಲು ತೂರಾಟದ ಘಟನೆ ಮಾಸುವ ಮುನ್ನವೇ ಗದಗನಲ್ಲಿ ಕೋಮು ಕದಡುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇದು ಬಕ್ರೀದ್ ಹಬ್ಬದಂದು ನಡೆದಿರೋದು ಎಂದು ತಿಳಿದು ಬಂದಿದೆ. ಅಪ್ರಾಪ್ತನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾಕಿಸ್ತಾನ ಧ್ವಜವನ್ನು ಪ್ರದರ್ಶಿಸುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಅನ್ನಇನ್ನೊಬ್ಬ ತನ್ನ ಖಾತೆಯಲ್ಲಿ ಮತ್ತೊಮ್ಮೆ ಹಂಚಿಕೊಂಡಿದ್ದಾನೆ.

ಈ ಫೋಟೊದಲ್ಲಿ, ಕಾರಿನ ಬಾನೆಟ್ ಮೇಲೆ ಇಸ್ಲಾಂ ಧರ್ಮದ ಬಾವುಟ ಇದೆ. ನಂಬರ್ ಪ್ಲೇಟ್ ಮೇಲೆ ಪಾಕಿಸ್ತಾನ ಧ್ವಜ ಹೋಲುವ ಚಿತ್ರವು ಕಂಡು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಗದಗ ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ 299, 353(2) ಮತ್ತು 3/5 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟದ ಘಟನೆಯ ಘಟನೆ ಮಾಸುವ ಮುನ್ನವೇ ಗದಗದಲ್ಲಿ ಇಂತಹ ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.


Spread the love

LEAVE A REPLY

Please enter your comment!
Please enter your name here