ಕೋಲಾರ:– ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಿ ಮಾದರಿ ಆಗಲಿ ಎಂದು ಸಚಿವ ಸಂತೋಷ್ ಲಾಡ್ ಸವಾಲ್ ಹಾಕಿದ್ದಾರೆ
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಿಂದೂ ಮುಸ್ಲಿಂ ಗಲಾಟೆ ಬಿಟ್ರೆ ಬಿಜೆಪಿ ಏನೂ ಮಾಡುತ್ತಿಲ್ಲ. ಕಲ್ಲು ತೂರಾಟ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ, ಹಿಂದೂ ಮಾತ್ರ ಎನ್ನುವವರು ಹೀಗೆ ಮಾಡಿ. ಅವರ ಆಸ್ತಿಗಳನ್ನ ಬಡವರಿಗೆ ಕೊಡಿ. ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಎನ್ನುವವರು ಮೊದಲು ಸಣ್ಣ ಜಾತಿಗಳವರೊಂದಿಗೆ ಮದುವೆ ಮಾಡಿಸಿ ಮಾದರಿಯಾಗಲಿ ಎಂದು ಸವಾಲೆಸೆದರು.
ಬಿಜೆಪಿ ನಾಯಕರ ಮಕ್ಕಳು ಯಾವ ಪ್ರತಿಭಟನೆಗೆ, ಯಾವ ಹೋರಾಟಕ್ಕೆ ಬಂದಿದ್ದಾರೆ? ಬರಲ್ಲ, ಅಲ್ಲಿ ಹೋರಾಟ ಮಾಡೋದು, ಗಾಯಗಳಾಗೋದು ಎಲ್ಲವೂ ಬಡವರ ಮಕ್ಕಳಿಗೆ. ಇನ್ನೂ ಬಿಜೆಪಿಯವರು ಏನು ಮಾಡಿದ್ದಾರೆ? ಶಕ್ತಿ ಪೀಠಗಳು ಹೆಚ್ಚಾಗಿ ಮಾಡಿರುವುದು ಕಾಂಗ್ರೆಸ್‌ನವರು ಎಂದರು. ಇನ್ನೂ ಭದ್ರಾವತಿ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮಸ್ಲಿಂ ಆಗಿ ಹುಟ್ಟುತ್ತೇನೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ದೇವೇಗೌಡ್ರು ಈ ಹಿಂದೆ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಅವರ ಬಗ್ಗೆ ನನಗೆ ಗೌರವ ಇದೆ. ಆದ್ರೆ ನಮ್ಮ ಶಾಸಕರು ಮಾತ್ರ ಹಾಗೆ ಮಾತನಾಡಬಾರದ? ನಾವು ಮಾತನಾಡಿದ್ರೆ ಓಲೈಕೆನಾ ಎಂದು ಪ್ರಶ್ನಿಸಿದರು.