ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಕಳೆದ 28 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ದಿಂಬು, ಚಾಪೆ, ಹಾಗೂ ಜಮ್ಖಾನಕ್ಕಾಗಿ ಮನವಿ ಮಾಡಿದ್ದರು. ಇದೀಗ ದರ್ಶನ್ ಮನವಿಗೆ ಕೋರ್ಟ್ ಅಸ್ತು ಎಂದಿದ್ದು ಕೋರ್ಟ್ ಆದೇಶದ ಮೇರೆಗೆ ದಿಂಬು, ಚಾಪೆ ಜೊತೆಗೆ ಎರಡು ಜಮ್ಖಾನವನ್ನು ಅಧಿಕಾರಿಗಳು ನೀಡಿದ್ದಾರೆ.
ಕಳೆದ ಇಪ್ಪತ್ತೆಂಟು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸರಿಯಾದ ಹಾಸಿಗೆ, ದಿಂಬು, ಇಲ್ಲದೇ ಪರದಾಡುತ್ತಿದ್ದಾರೆ. ಇದರ ಬಗ್ಗೆ ಮಂಗಳವಾರ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆದಿದ್ದು, ಇದೀಗ ನ್ಯಾಯಾಲಯದಲ್ಲಿ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಹಾಗಾಗಿ ದರ್ಶನ್‌ಗೆ ಇಂದು ಎರಡು ಜಮ್ಖಾನ ಹಾಗೂ ಚಾಪೆ, ದಿಂಬನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ.
ಮಂಗಳವಾರ ರಾತ್ರಿ ಕೇಂದ್ರ ಕಾರಾಗೃಹಕ್ಕೆ ಕೋರ್ಟ್ ಆದೇಶದ ಪ್ರತಿ ತಲುಪಿದ್ದು, ಅದರಂತೆ ದರ್ಶನ್‌ಗೆ ತನ್ನ ಸೆಲ್ ಮುಂದೆ ವಾಕಿಂಗ್ ಮಾಡಲು ಅವಕಾಶ ದೊರೆತಿದೆ. ಜೊತೆಗೆ ಎರಡು ಗಟ್ಟಿಯಾದ ಜಮ್ಖಾನ ಒಂದು ಚಾಪೆ ಜೊತೆಗೆ ತಲೆದಿಂಬು ನೀಡಲಾಗಿದೆ.
ಮಂಗಳವಾರ ನಡೆದ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಹಾಗೂ ಗ್ಯಾಂಗ್ ಸದಸ್ಯರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸದಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಅದರಂತೆ ಸದ್ಯಕ್ಕೆ ದರ್ಶನ್ ಎಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿಯೇ ಉಳಿಯಲ್ಲಿದ್ದು ಈ ಮೂಲಕ ದರ್ಶನ್ ಕೊಂಚ ಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ.
ಇನ್ನು ದರ್ಶನ್ ಸೆಲ್‌ನಲ್ಲಿ ಇದ್ದು ಸೆಕ್ಯೂರಿಟಿ ಬ್ಯಾರಕ್‌ಗೆ ಶಿಫ್ಟ್ ಮಾಡುವ ವಿಚಾರವಾಗಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜೈಲಿನ ಚೀಫ್ ಸೂಪರ್‌ಡೆಂಟ್ ಟ್ರೈನಿಂಗ್ ಎಂದು ಹೈದರಾಬಾದ್‌ಗೆ ಹೋಗಿದ್ದು, ಶನಿವಾರ ವಾಪಸ್ ಬರಲಿದ್ದಾರೆ. ಅವರು ಬಂದ ನಂತರ ಕ್ವಾರಂಟೈನ್ ಜೈಲಿನಲ್ಲಿ ಮುಂದುವರಿಸುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅದಲ್ಲದೆ ದರ್ಶನ್‌ಗೆ ಆರೋಗ್ಯ ಸಮಸ್ಯೆ ಸಹ ಇದ್ದು, ನೆನ್ನೆ ರಾತ್ರಿ ಜೈಲಿನ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ಕೊಡಿಸಲಾಗಿದೆ ಎನ್ನಲಾಗುತ್ತಿದೆ.