ಬೆಂಗಳೂರು:- ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15 ರಿಂದ ಮೂರು ದಿನಗಳು ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ ಎಂದು BWSSB ತಿಳಿಸಿದೆ.
Advertisement
ಎಲ್ಲೆಲ್ಲಿ ಯಾವಾಗ ನೀರು ಬಂದ್?
ಕಾವೇರಿ ಹಂತ 1, 2, 3, 4 ರಲ್ಲಿ: ಸೆಪ್ಟೆಂಬರ್ 16ರ ಬೆಳಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 17 ರ ಬೆಳಗ್ಗೆ 6 ಗಂಟೆಯ ವರೆಗೆ, ಒಟ್ಟು 24 ಗಂಟೆಗಳ ಕಾಲ ನೀರು ಸ್ಥಗಿತವಾಗಲಿದೆ.
ಕಾವೇರಿ 5ನೇ ಹಂತದಲ್ಲಿ: ಸೆಪ್ಟೆಂಬರ್ 15 ರ ಬೆಳಗ್ಗೆ 1 ಗಂಟೆಯಿಂದ ಸೆಪ್ಟೆಂಬರ್ 17 ರ ಮಧ್ಯಾಹ್ನ 1 ಗಂಟೆಯವರೆಗೆ ನೀರು ಸರಬರಾಜು ಸ್ಥಗಿತವಾಗಲಿದೆ.
ಒಟ್ಟು 5 ಹಂತಗಳಲ್ಲಿ ಸುಮಾರು 60 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತವಾಗಲಿದೆ. ಸಾರ್ವಜನಿಕರು ಮುಂಚಿತವಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಜಲಮಂಡಳಿ ಮನವಿ ಮಾಡಿದೆ. ಈ ಕುರಿತು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮೋಹನ್ ಮಾಹಿತಿ ನೀಡಿದ್ದಾರೆ.