ವಿಜಯಸಾಕ್ಷಿ ಸುದ್ದಿ, ಗದಗ: ನಿವೃತ್ತ ಉಭಯ ಉಪನಿರ್ದೇಶಕರಾದ ಎ.ಎಮ್. ವಡಿಗೇರಿ, ಎಮ್.ಎ. ರಡ್ಡೇರ, ನಿವೃತ್ತ ಪಿಡಬ್ಲ್ಯೂ ಇಂಜಿನಿಯರ್ ವೈ.ಐ. ಸಂಗಮ, ನಿವೃತ್ತ ಶಿಕ್ಷಕರಾದ ಎಸ್.ಎಚ್. ತಳ್ಳಿಹಾಳ ಅವರಿಗೆ ಪ್ರೌಢಶಾಲೆಯಲ್ಲಿ ಕಲಿಸಿದ ಗಣಿತ ಶಿಕ್ಷಕರಾದ ವಾಯ್.ಕೆ. ಪಿಡಗಣ್ಣವರ ಅವರನ್ನು ಶಿಕ್ಷಕ ದಿನಾಚರಣೆ ದಿನದಂದು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಯ್.ಕೆ. ಪಿಡಗಣ್ಣವರ, ನನ್ನ ವೃತ್ತಿ ಬದುಕಿನಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಅವರಿಂದು ಉನ್ನತ ಹುದ್ದೆಯಲ್ಲಿರುವುದು ವೈಯುಕ್ತಿಕವಾಗಿ ಸಂತೋಷವಾಗುತ್ತಿದೆ. ವೃತ್ತಿ ಜೀವನದಲ್ಲಿ ಮಾರ್ಗದರ್ಶನ ಮಾಡಿ ಸಹಕರಿಸಿದ ಕನಕದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಬಿ.ಎಫ್. ದಂಡಿನ ಮತ್ತು ಪ್ರಾಚಾರ್ಯ ಕೆ.ಬಿ. ತಳಿಗೇರಿ ಅವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾರಾದ ಬಿ.ವಾಯ್. ಡೊಳ್ಳಿನ, ಶಿಕ್ಷಕರಾದ ವಿಶ್ವನಾಥ ಕಮ್ಮಾರ ಉಪಸ್ಥಿತರಿದ್ದರು.



