ಬೆಳಗಾವಿ:- ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಜಿಗಿದು ಆಟೋ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಆಟೋ ಚಾಲಕನನ್ನು ಬೆಳಗಾವಿ ಕಂಗ್ರಾಳಿಯ ಕಿರಣ್ ಮನಗುಟಕರ (54) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ಮಗಳ ಮದುವೆ ಮಾಡಿದ್ದ ಕಿರಣ್ ಪ್ರಾಮಾಣಿಕವಾಗಿದ್ದ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಕಿರಣ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ.
ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಮಗೂ ನೋವು ತಂದಿದೆ. ಮಗಳ ಮದುವೆಯನ್ನು ಮಾಡಿದ್ದ, ಅದಲ್ಲದೇ, ಕಳೆದ ತಿಂಗಳಿನಲ್ಲಷ್ಟೇ ಮಗಳಿಗೆ ಮಗುವಾಗಿದೆ. 20-30 ವರ್ಷಗಳಿಂದ ಆಟೋ ಓಡಿಸುತ್ತಿದ್ದ. ಆದರೇ, ಸಾಲವಾಗಿದೆ ಎಂದು ಹಿಂದೊಮ್ಮೆ ಹೇಳಿದ್ದನಷ್ಟೇ ಎಂದು ಆಟೋ ಚಾಲಕ ಬಸವರಾಜ್ ಅವರೊಳ್ಳಿ ಹೇಳಿದರು.
ಪ್ರಕರಣ ದಾಖಲಿಸಿಕೊಂಡ ಮಾರ್ಕೇಟ್ ಠಾಣೆ ಪೊಲೀಸರು ಈಜುಗಾರರ ಸಹಾಯದಿಂದ ಶವವನ್ನು ಹೊರ ತೆಗೆದಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು



