ತಾಳಿ ಕಟ್ಟಿದ್ದ ಗಂಡನನ್ನೇ ಕೊಂದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿದ್ದ ಹೆಂಡ್ತಿ; ಸಿಕ್ಕಿಬಿದ್ದದ್ದು ಹೇಗೆ?

0
Spread the love

ಮೈಸೂರು:– ಜಿಲ್ಲೆಯ ಹುಣಸೂರು ತಾಲ್ಲೂಕು ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ಪರಿಹಾರ ಹಣದ ಆಸೆಗೆ ಪತಿಯನ್ನ ತಾನೇ ಕೊಂದು, ಹುಲಿ ಕೊಂದಿದೆ ಅಂತ ನಂಬಿಸಲು ಖತರ್ನಾಕ್ ಪತ್ನಿ ಯತ್ನಿಸಿದ ಘಟನೆ ಜರುಗಿದೆ.

Advertisement

ಕೊಲೆಯಾದ ವ್ಯಕ್ತಿಯನ್ನು ವೆಂಕಟಸ್ವಾಮಿ ಎಂದು ಗುರುತಿಸಲಾಗಿದೆ. ಈತನ ಪತ್ನಿ ಸಲ್ಲಾಪುರಿ ಪತಿಯನ್ನು ಕೊಲೆ ಮಾಡಿ ಹುಲಿ ಕೊಂದಿದೆ ಎಂದು ನಾಟಕವಾಡಿದ್ದಳು.

ಈ ದಂಪತಿ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸ ಇದ್ದರು. ಒಂದು ವಾರದ ಹಿಂದೆ ಪತಿ ನಾಪತ್ತೆಯಾಗಿದ್ದಾರೆ ಅಂತ ಪತ್ನಿ ದೂರು ನೀಡಿದ್ದರು. ಹುಲಿ ಆತನನ್ನು ಕೊಂದು ಎಳೆದುಕೊಂಡು ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಳು. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಯಾವುದೇ ಪ್ರಾಣಿ ಬಂದ ಕುರುಹು ಇರಲಿಲ್ಲ. ಅನುಮಾನಗೊಂಡು ಮನೆಯಲ್ಲಿ ಹುಡುಕಾಟ ವೇಳೆ ಮನೆಯ ಹಿಂದೆ ತಿಪ್ಪೆಗುಂಡಿಯಲ್ಲಿ ವೆಂಕಟಸ್ವಾಮಿ ಶವ ಪತ್ತೆಯಾಗಿದೆ.

ವಿಷ ಹಾಕಿ ಪತಿ ಕೊಲೆ ಮಾಡಿದ್ದ ಪತ್ನಿ ನಂತರ ತಿಪ್ಪೆಗುಂಡಿಗೆ ಎಳೆದುಕೊಂಡು ಹಾಕಿ ಕಥೆ ಕಟ್ಟಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಪರಿಹಾರದ ಹಣಕ್ಕಾಗಿ ಕೃತ್ಯವೆಸಗಿರುವ ಬಗ್ಗೆ ಹೇಳಿಕೆ ನೀಡಿದ್ದಾಳೆ.


Spread the love

LEAVE A REPLY

Please enter your comment!
Please enter your name here