ವಿಜಯಸಾಕ್ಷಿ ಸುದ್ದಿ, ಗದಗ
ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಎರಡು ಗುಂಪುಗಳ ಮೇಲೆ ಮುಂಡರಗಿ ಪೊಲೀಸರು ದಾಳಿ ಮಾಡಿ 16 ಜನರನ್ನು ಬಂಧಿಸಿ, 25 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಡರಗಿ ಠಾಣೆಯ ಪಿಎಸ್ಐ ನೂರಜಾನ್ ಸಬರ್ ಹಾಗೂ ಪೊಲೀಸರು ಈ ದಾಳಿ ನಡೆಸಿದ್ದರು.
ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಕಾಲುವೆ ಬಳಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮೇವುಂಡಿ ಗ್ರಾಮದ ಕಾಶಪ್ಪ ಸಿದ್ದಪ್ಪ ತಳವಾರ, ಮುಂಡರಗಿಯ ಹಳೆ ಮಾರುಕಟ್ಟೆ ಬಳಿ ನಿವಾಸಿ ಯಮನೂರು ರಾಮಣ್ಣ ಭಜಂತ್ರಿ, ಮೇವುಂಡಿ ಗ್ರಾಮದ ಶಿವಪುತ್ರಪ್ಪ ಬಾಳಪ್ಪ ಹಾರೋಗೇರಿ, ಮುಂಡರಗಿ ಪಟ್ಟಣದ ಕೋಟೆ ಓಣಿಯ ಮಾದೇಗೌಡ್ ಹನಮಂತ ಡೋಣಿ, ಡಂಬಳದ ಮದರಸಾಬ್ ಕಾಶಿಮಸಾಬ್ ಖಸ್ತರ್, ಗದಗ ಶಹರದ ಹಾಳದಿಬ್ಬ ಓಣಿಯ ಭರತ್ ಯಲ್ಲೂಸಾ ಬದಿ, ಒಕ್ಕಲಗೇರಿ ಓಣಿಯ ಮಾರುತಿ ಮುದಕಪ್ಪ ಚನ್ನದಾಸರ್, ಟಾಂಗಾಕೂಟ್ ಬಳಿಯ ನಿವಾಸಿ ಸಂತೋಷ ಬಸವರಾಜ್ ಕುಕನೂರು, ಡಂಬಳದ ಮಲ್ಲಪ್ಪ ರಾಮಪ್ಪ ಹೊಸಕೇರಿ ಎಂಬುವವರನ್ನು ಬಂಧಿಸಿ ಅವರಿಂದ 18,100 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶಿಂಗಟರಾಯನಕೇರಿತಾಂಡಾದಲ್ಲಿ ಜೂಜಾಟದಲ್ಲಿ ತೊಡಗಿದ್ದ ಅದೇ ಗ್ರಾಮದ ವಿನಾಯಕ ಗುರುನಾಥ್ ನಾಯಕ್, ಥಾಕ್ರೆಪ್ಪ ಚಂದ್ರಪ್ಪ ನಾಯಕ್, ತುಕರಾಮ್ ಪರಶುರಾಮ ನಾಯಕ್, ಗುರು ಹಾಮೇಶ್ ನಾಯಕ್, ಕುಮಾರ್ ಲಕ್ಷ್ಮಣ್ಣ ನಾಯಕ್, ನಾಗೇಶ್ ಹಾಮೇಶ್ ಲಮಾಣಿ, ಶೇಖರ್ ಚೆನ್ನಪ್ಪ ಲಮಾಣಿ ಎಂಬುವವರನ್ನು ಬಂಧಿಸಿ, ಅವರಿಂದ ನಗದು 7100 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ.