ಬೆಂಗಳೂರು:-ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮೇಲಿನ ಶೇ50ರಷ್ಟು ರಿಯಾಯಿತಿ ಆಫರ್ ಇಂದೇ ಕೊನೆಯಾಗಲಿದೆ.
ಈ ಯೋಜನೆಯಡಿ ಈಗಾಗಲೇ ಕೋಟಿಗಟ್ಟಲೆ ದಂಡ ಸಂಗ್ರವಾಗಿದೆ. ಹಲವಾರು ವಾಹನ ಸವಾರರು ತನ್ನ ಬಾಕಿಯಿದ್ದ ದಂಡವನ್ನೆಲ್ಲಾ ಇದೇ ಬೆಸ್ಟ್ ಟೈಂ ಅಂತ ಪೇ ಮಾಡ್ತಾ ಇದ್ದಾರೆ. ಎಸ್, ಶೇ50ರಷ್ಟು ರಿಯಾಯಿತಿ ಆಫರ್‌ನಲ್ಲಿ ಸಂಚಾರ ದಂಡ ಪಾವತಿಗೆ ಇಂದೇ ಅಂತಿಮ ದಿನವಾಗಿದೆ. ರಾತ್ರಿ 12 ಗಂಟೆಗೆ ರಿಯಾಯಿತಿ ಅವಕಾಶ ಅಂತ್ಯವಾಗಲಿದ್ದು, ದಂಡ ಪಾವತಿಸಲು ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿಯಂತ್ರಣ ಕಚೇರಿ ಬಳಿ ವಾಹನಗಳ ಮಾಲೀಕರು ಜಮಾಯಿಸಿದ್ದಾರೆ.
ಆಗಸ್ಟ್ 23ರಿಂದ ಈ ಅವಕಾಶ ನೀಡಲಾಗಿದ್ದು, ಇಂದು ಮಧ್ಯಾಹ್ನ 2 ಗಂಟೆಯವರೆಗೂ ಬರೊಬ್ಬರಿ 89 ಕೋಟಿ ರೂಪಾಯಿ ದಂಡದ ಮೊತ್ತ ಪಾವತಿಯಾಗಿದೆ. 30 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇನ್ನೂ ಪೊಲೀಸ್ ಇಲಾಖೆಯ ಸಂಚಾರಿ ಇ – ಚಲನ್‌ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ.50ರಷ್ಟು ದಂಡ ಪಾವತಿ ವ್ಯವಸ್ಥೆಗೆ ವಾಹನ ಸವಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಿಯಾಯಿತಿ ಸೌಲಭ್ಯ ಪಡೆಯಲು ಸೆ.12ರಂದು ಕೊನೆ ದಿನವಾಗಿದೆ ಎಂದು ಈ ಮೊದಲೇ ತಿಳಿಸಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ತದನಂತರ ಈ ಯೋಜನೆ ವಿಸ್ತರಿಸುವುದಿಲ್ಲ. ತದನಂತರ ದಂಡ ಪಾವತಿಸುವವರು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಹೀಗಾಗಿ ಸೌಲಭ್ಯವನ್ನು ಸದ್ಬಳಕೆ ಮಾಡುವಂತೆ ಮನವಿ ಮಾಡಿತ್ತು.