ವಿಜಯಸಾಕ್ಷಿ ಸುದ್ದಿ, ಲಕ್ಷೇಮಶ್ವರ: ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯ ಉಂಟಾಗುತ್ತಿದ್ದು, ಜನರು ಇದರಿಂದ ಬೇಸತ್ತಿದ್ದಾರೆ. ಇದಕ್ಕಾಗಿ ಸುಮಾರು 37 ಕೋಟಿ ರೂಗಳ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಸರಿಪಡಿಸುವ ಕಾಮಗಾರಿಗೆ ಚಾಲನೆ ದೊರೆಯಲಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯವರು ಶುಕ್ರವಾರ ಪಟ್ಟಣದಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸುವ ಸ್ಥಳಗಳನ್ನು ಗುರುತಿಸಿ ಪರಿಶೀಲಿಸಿದರು.
ಸುಮಾರು 2 ದಶಕಗಳಿಗಿಂತಲೂ ಅಧಿಕ ವರ್ಷಗಳ ಹಿಂದೆ ಮೇವುಂಡಿಯದ್ದ ಲಕ್ಷೇಮಶ್ವರಕ್ಕೆ ನೀರು ಪೂರೈಸಲು ಹಾಕಿರುವ ಪೈಪ್‌ಲೈನ್ ಅಲ್ಲಲ್ಲಿ ತುಕ್ಕು ಹಿಡಿದು ನೀರು ಸೋರಿಕೆಯಾಗುತ್ತಿದೆ. ಇದರ ದುರಸ್ಥಿಗಾಗಿ ಮತ್ತು ಪಟ್ಟಣಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತುಕ್ಕು ಹಿಡಿದ ಪೈಪ್‌ಗಳ ದುರಸ್ಥಿ ಮತ್ತು ಪಟ್ಟಣದಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸುವ ಕುರಿತು ಇಲಾಖೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದರು.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿ, ಪಟ್ಟಣಕ್ಕೆ ಮೇವುಂಡಿಯದ್ದ ನೀರು ಪೂರೈಸುವ ಪೈಪ್‌ಲೈನ್‌ಗಳು ಅಲ್ಲಲ್ಲಿ ತುಕ್ಕು ಹಿಡಿದು ನೀರು ಸೋರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 37 ಕೋಟಿ ರೂಗಳ ವೆಚ್ಚದಲ್ಲಿ ನೀರು ಪೂರೈಕೆ ವ್ಯವಸ್ಥೆ ಸರಿಪಡಿಸುವ ಕಾಮಗಾರಿ ಪ್ರಾರಂಭವಾಗಲಿದೆ. ಅದಕ್ಕಾಗಿ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲು ಜಾಗೆಗಳನ್ನು ಪರಿಶೀಲನೆ ಮಾಡಿದ್ದಾರೆ. ಸೂರಣಗಿಯಿಂದ ಸುಮಾರು 4 ಕಿಮೀ ಪೈಪ್‌ಲೈನ್ ದುರಸ್ಥಿ ಮಾಡಲಾಗುವುದು ಮತ್ತು ಇಲಾಖೆಯಿಂದ ಪಟ್ಟಣವನ್ನು 5 ಜೋನ್‌ಗಳಾಗಿ ಮಾಡಲಾಗುತ್ತಿದೆ. ಅದರಲ್ಲಿ ಸುಮಾರು 3 ಜೋನ್‌ಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಹೊಂದಲಾಗಿದೆ. 24/7 ನೀರು ಪೂರೈಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ವೇಳೆ ಪುರಸಭೆ ಸಿಬ್ಬಂದಿ ಹನುಮಂತಪ್ಪ ನಂದೆಣ್ಣವರ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣಪ್ಪ ನಂದೆಣ್ಣವರ, ನಿವೃತ್ತ ನೌಕರ ಗಂಗಾಧರ ಅರಳಿ ಮತ್ತು ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಇಇ ಜಗದೀಶ ಹೊಸಮನಿ, ಎಇ ಬಸಪ್ಪ ಚೌಡಪ್ಪನವರ, ಗುತ್ತಿಗೆದಾರರು, ಸೆಕ್ಷನ್ ಆಫೀಸರ್ ಹಾಗೂ ಸಿಬ್ಬಂದಿಗಳು, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರನ್ನೊಳಗೊಂಡ ತಂಡ ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್ ಮೈದಾನದ ಬಳಿ ಮತ್ತು ಹುಬ್ಬಳ್ಳಿ ರಸ್ತೆಯಲ್ಲಿರುವ ಲಕ್ಷೇಮಶ್ವರ ನಗರದ ಬಳಿ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲು ಜಾಗೆಗಳನ್ನು ಪರಿಶೀಲಿಸಿದರು.