ಜಾತಿ ಜನಗಣತಿ| ಕಾಂತರಾಜು ವರದಿ ತಿಪ್ಪೆಗೆ ಹಾಕ್ತೀರಾ? – ಸಿಟಿ ರವಿ ಕಿಡಿ

0
Spread the love

ಚಿಕ್ಕಮಗಳೂರು:- ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಜನಗಣತಿ ಚರ್ಚೆ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮನೆ ಮನೆಗೂ ಹೋಗಿ ಅಕ್ಯೂರೇಟ್ ಸಮೀಕ್ಷೆ ಎಂದು ಹೇಳಿದ್ರಿ. ಈಗ ಕಾಂತರಾಜು ವರದಿ ತಿಪ್ಪೆಗೆ ಹಾಕ್ತೀರಾ? ಯಾರ ಮನೆ ದುಡ್ಡು, ನಿಮ್ಮ ಮನೆಯದ್ದಾ ಇಲ್ಲ, ನಿಮ್ಮ ಫಾದರ್ ಮನೆಯದ್ದಾ? ಎಂದು ಸರ್ಕಾರಕ್ಕೆ ಕಟುವಾಗಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವೇ ಜಾತಿ, ಜನ ಗಣತಿ ಎರಡನ್ನೂ ಮಾಡ್ತಿದೆ. ಹೀಗಿರುವಾಗ ನಮ್ಮದು ಶೈಕ್ಷಣಿಕ ಸಮೀಕ್ಷೆ ಅಂತ ಹೆಸರಿಡೋದು ಯಾವ ಲಾಜಿಕ್? ಶೈಕ್ಷಣಿಕ ಸಮೀಕ್ಷೆ ಅಂದು ಬ್ರಾಹ್ಮಣ -ಕ್ರಿಶ್ಚಿಯನ್, ಒಕ್ಕಲಿಗ-ಕ್ರಿಶ್ಚಿಯನ್, ಬಿಲ್ಲವ-ಕ್ರಿಶ್ಚಿಯನ್ ಅಂತ ಹೊಸ ಕಾಲಂ ಸೇರಿಸಿದ್ದೀರಾ? ಸದ್ಯ, ಮುಸ್ಲಿಂ-ಕ್ರಿಶ್ಚಿಯನ್ ಅನ್ನೋ ವರ್ಗವನ್ನ ಸೇರಿಸಿಲ್ಲ. ನಿಮಗೆ ಈ ರೀತಿ ಮಾಡಲು ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಸಂಪುಟದಲ್ಲೇ ಸಹಮತ ಬರದಿದ್ದ ಸಮೀಕ್ಷೆಯನ್ನ ತಿಪ್ಪೆಗೆ ಹಾಕಿ, ಮತ್ತೆ ಜಾತಿ-ಜಾತಿಗಳ ನಡುವೆ ಭಿನ್ನತೆ ತಂದು ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.


Spread the love

LEAVE A REPLY

Please enter your comment!
Please enter your name here