ದಾವಣಗೆರೆ:- ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಯಾವನಿಗೂ ಬಾಲ ಬಿಚ್ಚೋದಕ್ಕೆ ಬಿಡುವುದಿಲ್ಲ. ಅಲ್ಲಿ ಘೋಷಣೆ ಕೂಗಿದ ಪದ ಬೇರೆ ಇದೆ, ಆ ರೀತಿ ಇಲ್ಲವೇ ಇಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದು ನಿಮಗೆ ಗೊತ್ತಾ? ಏನ್ ಗೊತ್ತು ಹೇಳಿ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು. ಅಲ್ಲದೇ ನನ್ನ ಹತ್ತಿರ ಏನು ಕೂಗಿದ್ರೂ ಎಂಬ ಮಾಹಿತಿ ಇದೆ. ಆದರೆ ಈಗ ಮಾತಾಡೋದಿಲ್ಲ. ಎಫ್‍ಎಸ್‍ಎಲ್ ವರದಿ ಬಂದ ನಂತರ ನಾನು ಮಾತಾಡುತ್ತೇನೆ. ಏನಾದರೂ ಆ ರೀತಿ ಹೇಳಿದ್ದರೆ ಅವರಿಗೆ ಕಠಿಣವಾದ ಶಿಕ್ಷೆ ನೀಡಿ ಎಂದು ಹೇಳಿದ್ದೇನೆ. ಬೇರೆ ದೇಶಕ್ಕೆ ಜಿಂದಾಬಾದ್ ಎನ್ನುವುದು ಕಾಂಗ್ರೆಸ್‌ಗೆ ಏನು ಬಂದಿಲ್ಲ. ಬಿಜೆಪಿಯವರು ಹೇಳುತ್ತಾರೆ ಎಂದು ಎಲ್ಲದಕ್ಕೂ ಉತ್ತರ ಕೊಡುವುದಕ್ಕೆ ಆಗೋದಿಲ್ಲ ಎಂದಿದ್ದಾರೆ.
ಪಹಲ್ಗಾಮ್‌ನಲ್ಲಿ ದಾಳಿ ನಡೆದಿತ್ತು, ಅದರ ಮುನ್ಸೂಚನೆ ಮೋದಿಗೆ ಗೊತ್ತಿರಲಿಲ್ವಾ? ಅಲ್ಲಿ ಜನರು ತೀರಿಕೊಂಡರು, ಇಲ್ಲಿ ಬಿಜೆಪಿಯವರು ವಿಜೃಂಭಿಸುತ್ತಿದ್ದಾರೆ. ಯಾಕೆ ಈ ದಾಳಿ ಆಯ್ತು ಎಂದು ಒಬ್ಬ ಬಿಜೆಪಿಯವನಾದ್ರೂ ಕೇಳಿದ್ದಾನಾ? ಮಣಿಪುರ ಗಲಾಟೆಯಾದಾಗ ಬಿಜೆಪಿಗರ ಗಂಟಲು ಹೋಗಿತ್ತಂತಾ? ಈಗ ಮದ್ದೂರಿನ ವಿಚಾರಕ್ಕೆ ಬಿಜೆಪಿಗರು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.



