HomeGadag Newsವಿದ್ಯಾವಂತರು ಕೃಷಿಯಲ್ಲಿ ಸಾಧನೆ ಮಾಡಲಿ: ಈಶ್ವರಪ್ಪ ಹಂಚಿನಾಳ

ವಿದ್ಯಾವಂತರು ಕೃಷಿಯಲ್ಲಿ ಸಾಧನೆ ಮಾಡಲಿ: ಈಶ್ವರಪ್ಪ ಹಂಚಿನಾಳ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಯುವಜನರು ಎಷ್ಟೇ ಶಿಕ್ಷಣ ಪಡೆದರೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಭೂಮಿತಾಯಿ ನಂಬಿದವರನ್ನು ಕೈಬಿಡುವುದಿಲ್ಲ. ಕೃಷಿಯಲ್ಲಿ ಆಧುನಿಕತೆ ಮತ್ತು ಸಾವಯವ ಪದ್ಧತಿಗಳನ್ನು ಅನುಸರಿಸುವ ಮೂಲಕ ಕೃಷಿಯಲ್ಲಿ ಅತ್ಯುನ್ನತ ಸಾಧನೆ, ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ ಎಂದು ಮುಂಡರಗಿಯ ಪ್ರಗತಿಪರ ರೈತ ಹಾಗೂ ಕೃಷಿ ಪಂಡಿತ, ಪುರಸ್ಕೃತ ಈಶ್ವರಪ್ಪ ಹಂಚಿನಾಳ ಹೇಳಿದರು.

ಅವರು ಶನಿವಾರ ಗದಗ ನಗರದಲ್ಲಿ ಉಷಾದೇವಿ ಗೋವಿಂದರಾಜ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ನಲ್ಲಿ ಆಯೋಜಿಸಲಾದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 11ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಾಧಕರು ಮನಸ್ಸು ಮಾಡಿದರೆ ಬರಡು ಭೂಮಿಯಲ್ಲೂ ಬಂಗಾರದಷ್ಟು ಬೆಳೆ ತೆಗೆಯಲು ಸಾಧ್ಯವಿದೆ. ಭೂಮಿಯಲ್ಲಿ ಅಮೃತವೂ ಇದೆ, ವಿಷವೂ ಇದೆ. ಯುವಕರು ಕೃಷಿಗೆ ಮಹತ್ವ ನೀಡದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಕ್ಕಾಗಿ ಕಾಯ್ದಿರಿಸುವ, ಪರಿತಪಿಸುವ ಕಾಲ ಬರುವ ಸಾಧ್ಯತೆ ಇದೆ. ಭಾರತ ಮತ್ತು ಕರ್ನಾಟಕದ ಫಲವತ್ತಾದ ಭೂಮಿಯಲ್ಲಿ ಕೃಷಿ ಸಾಧನೆಗೆ ಹೆಚ್ಚಿನ ಅವಕಾಶಗಳಿವೆ ಎಂದು ಅವರು ಹೇಳಿದರು.

ಸಭೆಯಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತ ಪಿಎಸ್‌ಐ ಮಾರುತಿ ಜೋಗದಂಡಕರ ಹಾಗೂ ಗುರುರಾಜ ಬೂದಿಹಾಳ ಅವರನ್ನು ಸನ್ಮಾನಿಸಿ, ಮಾತನಾಡಿಸಿದರು. ಅವರು ಪೊಲೀಸ್ ಇಲಾಖೆಯ ಜನಸ್ನೇಹಿ ಕೆಲಸ ಮತ್ತು ಅಪರಾಧ ಕಡಿಮೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಿರುವುದನ್ನು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಜಶೇಖರ ಗಚ್ಚಿನಮಠ ಹಾಗೂ ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಅವರೂ ಮಾತನಾಡಿದರು.

ಸಭೆಯಲ್ಲಿ ಸಾಧಕರಾದ ಪಾರ್ವತಮ್ಮ ಶಾಬಾದಿಮಠ, ಪೂರ್ಣಿಮಾ ಆಟದ, ಶಶಿಧರ ಅಮಾತ್ಯ, ವಿಶ್ವ ಕವಲೂರು, ವಿಜಯ ವಸ್ತುದ, ಮಧುಮತಿ ಕರ್ಜಗಿ, ಮಲ್ಲಿಕಾರ್ಜುನ ಚಕ್ರಸಾಲಿ, ಪ್ರಕಾಶಗೌಡ ಪಾಟೀಲ, ಪ್ರಕಾಶ ಪಲ್ಲೇದ, ರಾಜು ಗುಡಿಮನಿ, ಗಾಯತ್ರಿ ಹಳ್ಳಿ, ಕೆ.ವ್ಹಿ. ಕರವೀರಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಮಾತನಾಡಿ, ಶಿವಸಂಗಮ ಎಲ್ಲ ಜನಾಂಗಕ್ಕೂ ಆರ್ಥಿಕ ನೆರವು ನೀಡುವ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ಗ್ರಾಹಕರ ಸರಿಯಾದ ಸಾಲ ಮರುಪಾವತಿಗಳಿಂದ ಸಂಸ್ಥೆಯು ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ವೀರಯ್ಯ ಶಿವಕಾಳಿಮಠ ತಿಳಿಸಿದ್ದಾರೆ, ವರ್ಷದಿಂದ ವರ್ಷಕ್ಕೆ ಸಂಸ್ಥೆಯು ಪ್ರಗತಿ ಹೊಂದುತ್ತಿದ್ದು, 2025ನೇ ಸಾಲಿನಲ್ಲಿ 52 ಲಕ್ಷ 27 ಸಾವಿರ ರೂ.ಗಳ ನಿವ್ವಳ ಲಾಭ ಗಳಿಸಿ, ಶೇ. 12ರಷ್ಟು ಡಿವಿಡೆಂಡ್ ಶೇರುದಾರರಿಗೆ ನೀಡಲಿದ್ದು, ಸಂಸ್ಥೆಯ ಭವಿಷ್ಯ ಬೆಳಗುವುದಾಗಿದ್ದು, ಮುಂದಿನ ವರ್ಷಗಳಲ್ಲೂ ಉತ್ತಮ ಸೇವೆ ನೀಡುವುದಾಗಿ ಹೇಳಿದರು.
ವೇದಿಕೆಯಲ್ಲಿ ನಿರ್ದೆಶಕರಾದ ಎಂ.ಬಿ. ಲಿಂಗದಾಳ, ಗೀತಾ ಪಲ್ಲೇದ, ಸರೋಜಾ ಲಿಂಗದಾಳ, ಶೋಭಾ ಶಿವಕಾಳಿಮಠ, ಕವಿತಾ ದೇಸಾಯಿಮಠ, ಕಳಕಪ್ಪ ನಾಗರಾಳ, ಸುರೇಶ ಸರ್ವಿ ಉಪಸ್ಥಿತರಿದ್ದರು.

ಸೌಹಾರ್ದ ನಿರ್ದೆಶಕ ಗಿರಿಯಪ್ಪ ಗಾಣಿಗೇರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಗೌರಮ್ಮ ಕಟ್ಟಿಮನಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ನಿರ್ದೆಶಕ ಪಿ.ಜೆ. ದೇಸಾಯಿಮಠ ಸ್ವಾಗತಿಸಿದರು. ವ್ಯವಸ್ಥಾಪಕ ಎಂ.ಎ. ಬಡಿಗೇರ ಜಮಾ-ಖರ್ಚು ಹಾಗೂ ಲಾಭ-ಹಾನಿ ಪತ್ರಿಕೆ ಸಾದರಪಡಿಸಿದರು. ಟಿ.ವಿ. ಸಂಶಿ ಅಢಾವೆ ಪತ್ರಿಕೆ ಮಂಡಿಸಿದರು. ನಿರ್ದೆಶಕ ಎಂ.ಜಿ. ಗಾಣಿಗೇರ ವಂದಿಸಿದರು.

ಧಾರವಾಡ ಕೆಎಂಎಫ್ ನಿರ್ದೆಶಕ ಹೆಚ್.ಜಿ. ಹಿರೇಗೌಡ್ರ ಮಾತನಾಡಿ, ಶಿವಸಂಗಮ ಸಹಕಾರಿ ಸಂಘ ಆರ್ಥಿಕ ಕ್ಷೇತ್ರದಲ್ಲಿ ಸಾಕ್ಷಾತ್ ಸಾಧನೆ ಮಾಡಿದ್ದು, ಗ್ರಾಹಕರ ವಿಶ್ವಾಸವನ್ನು ಸಂಪಾದಿಸಿರುವುದು, ಮುಂದೆ ಶಿವಸಂಗಮ ಬ್ಯಾಂಕ್ ಆಗಿ ಪರಿವರ್ತನೆ ಹೊಂದಲು ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ ಎಂದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!