HomeEntertainmentಪ್ರತಿಭಾವಂತರಿಗೆ ಸುವರ್ಣಾವಕಾಶ: ಜೀ ಕನ್ನಡ ವಾಹಿನಿಯಿಂದ ಗದಗದಲ್ಲಿ ಮಹಾ ಆಡಿಷನ್!

ಪ್ರತಿಭಾವಂತರಿಗೆ ಸುವರ್ಣಾವಕಾಶ: ಜೀ ಕನ್ನಡ ವಾಹಿನಿಯಿಂದ ಗದಗದಲ್ಲಿ ಮಹಾ ಆಡಿಷನ್!

For Dai;y Updates Join Our whatsapp Group

Spread the love

ಗದಗ: ಪ್ರತಿಭೆಗಳನ್ನು ಗುರುತಿಸುವಲ್ಲಿ ನಂ.1 ಚಾನೆಲ್ ಆಗಿರುವ ಜೀ ಕನ್ನಡ ವಾಹಿನಿ ಮತ್ತೊಮ್ಮೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದೆ. ಜನಪ್ರಿಯ ಕಾರ್ಯಕ್ರಮಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಕಿಲಾಡಿಗಳುಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ಆಡಿಷನ್‌ಗಳು ನಡೆಯುತ್ತಿವೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ವಯೋಮಿತಿ 6 ರಿಂದ 60 ವರ್ಷಗಳವರೆಗೆ ಇರಬೇಕು. ಉತ್ತಮ ನೃತ್ಯ ಪ್ರತಿಭೆ ಹೊಂದಿರುವವರಿಗೇ ಅವಕಾಶ ದೊರೆಯಲಿದೆ. ಅದೇ ರೀತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ 16 ರಿಂದ 60 ವರ್ಷ ವಯಸ್ಸಿನವರು ಭಾಗವಹಿಸಬಹುದು. ತಮ್ಮದೇ ಕಾಮಿಡಿ ಸ್ಕಿಟ್ ಪ್ರದರ್ಶಿಸಬೇಕಿದ್ದು, ರೀಲ್ಸ್ ವಿಡಿಯೋಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ವಾಹಿನಿ ತಿಳಿಸಿದೆ.

ಆಡಿಷನ್ ವಿವರಗಳು:
ದಿನಾಂಕ: 16 ಸೆಪ್ಟೆಂಬರ್ 2025 (ಮಂಗಳವಾರ)
ಸಮಯ: ಬೆಳಗ್ಗೆ 9 ಗಂಟೆಯಿಂದ
ಸ್ಥಳ: ಡಾ. ಎಸ್.ವಿ. ತೋಟಗಂಟಿಮಠ, ನರ್ಸಿಂಗ್ ಸೈನ್ಸ್ ಸಂಸ್ಥೆ, ಸಂಭಾಪುರ ರಸ್ತೆ, ಎಪಿಎಂಸಿ ಬ್ಯಾಕ್ ಗೇಟ್ ಹತ್ತಿರ, ಹವಾಮಾನ ಇಲಾಖೆ ಎದುರು, ಗದಗ

ಆಡಿಷನ್‌ಗೆ ಬರುವವರು ಪಾಸ್ ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್‌ನ ಪ್ರತಿಯನ್ನು ತರಬೇಕು. ಜೀ ಕನ್ನಡ ವಾಹಿನಿ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಶುಲ್ಕವಿಲ್ಲ ಎಂದು ಸ್ಪಷ್ಟಪಡಿಸಿದೆ. ವಾಹಿನಿಯ ಹೆಸರಿನಲ್ಲಿ ಹಣ ವಸೂಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!