ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಐಷಾರಾಮಿ ವಾಚ್ ಕಳ್ಳತನ ಮಾಡಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಹಿಂದೂಪುರ ಮೂಲದ ಶೇಷ ರೆಡ್ಡಿ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ಐಷಾರಾಮಿ ವಾಚ್ ಶೋ ರೂಮ್ ಗಳಾದ ಫಾಸಿಲ್ , ಅರ್ಮಾನಿ ಸೇರಿದಂತೆ ಹಲವು ವಾಚ್ ಶೋ ರೂಮ್ ಗಳಿಗೆ ವಾಚ್ ಸ್ಟಾಕ್ ಡೆಲಿವರಿ ಮಾಡುತ್ತಿದ್ದನು.
ಕ್ರಿಟಿಕಲ್ ಎಂಬ ಲಾಜಿಸ್ಟಿಕ್ಸ್ ಕಂಪನಿ ಐಷಾರಾಮಿ ಕಂಪನಿಯ ವಾಚ್ ಡಿಸ್ಟ್ರಿಬ್ಯೂಟರ್ ಆಗಿದ್ರು. ಈ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿದ್ದ ಶೇಷಾರೆಡ್ಡಿ, ಪ್ರತಿ ದಿನ ಮನೆಗೆ ಹೋಗುವಾಗ ಯಾರಿಗೂ ಗೊತ್ತಿಲ್ಲದೆ ವಾಚ್ ಕದಿಯುತ್ತಿದ್ದನು.
ಸುಮಾರು 40 ರಿಂದ 50 ಸಾವಿರ ಬೆಲೆಯ ವಾಚ್ ಗಳನ್ನ ಕದ್ದು ಒ ಎಲ್ ಎಕ್ಸ್ ನಲಿ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದನು. ಸದ್ಯ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಯನ್ನು ಬಂಧಿಸಿ10 ಲಕ್ಷ ಮೌಲ್ಯದ 70 ಐಷಾರಾಮಿ ವಾಚ್ ಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.



