
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಮಂಗಳವಾರ ಸಂಜೆ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ. ಯಲಬುರ್ಗಾ ತಾಲೂಕಿನ ಗಾಣಧಾಳ ಪಂಚಾಯಿತಿ ವ್ಯಾಪ್ತಿಯ ಹಿರೇವಡ್ರಕಲ್ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿದ್ದು, ಹಾಗೂ ಎರಡು ಎತ್ತುಗಳು ಸಹ ಅಸು ನೀಗಿವೆ.
ಮೃತ ಯುವಕನನ್ನು ದ್ಯಾಮಣ್ಣ ಪುರದ (17) ಎಂದು ಗುರುತಿಸಲಾಗಿದೆ. ಮಳೆ ಬಂದ ವೇಳೆ ಹೊಲದಲ್ಲಿ ತಾಯಿಯೊಂದಿಗೆ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಸಿಡಿಲಿನ ಶಾಖದಿಂದ ಯುವಕನ ತಾಯಿ ಗಾಯಗೊಂಡಿದ್ದಾರೆ.



