ನಿಖಿಲ್ ಕುಮಾರಸ್ವಾಮಿ ಬೀದರ್ ಜಿಲ್ಲಾ ಸಂಚಾರ: ಬೆಳೆ, ಮನೆ ಹಾನಿ ವೀಕ್ಷಣೆ; ಪರಿಹಾರಕ್ಕೆ ಒತ್ತಾಯ

0
Spread the love

ಬೀದರ್: ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಸೆಪ್ಟೆಂಬರ್ 16ರಂದು ಮಂಗಳವಾರ ಬೀದರ್ ಜಿಲ್ಲಾ ಪ್ರವಾಸ ಕೈಗೊಂಡು, ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮತ್ತು ನೊಂದ ಸಂತ್ರಸ್ಥರ ಭೇಟಿ ಮತ್ತು ಸಾಂತ್ವನ ಹಾಗೂ ಸರ್ಕಾರ ಕೈಗೊಂಡಿರುವ ನೆರೆ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

Advertisement

ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಮರಕಲ್, ಅಲಿಯಂಬರ್, ಇಸ್ಲಾಂಪೂರ, ಜಾಂಪಾಡ್ ಗ್ರಾಮಗಳ ರೈತರ ಜಮೀನುಗಳಿಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದ ಅವರು, ಜಮೀನಿನಲ್ಲಿ ನಿಂತಿರುವ ನೀರಿನಲ್ಲೇ ತೆರಳಿ ಬೆಳೆ ಹಾನಿ ಪರಿಶೀಲನೆ ನಡೆಸಿ, ಅಲ್ಲಿದ್ದ ರೈತರಿಂದ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಮರಕಲ್ ಹಾಗೂ ಇತರೆ ಗ್ರಾಮಗಳಲ್ಲಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಿಖಿಲ್ ಕುಮಾರಸ್ವಾಮಿರವರು, ಮನೆ ಕೆಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಧನ ಸಹಾಯ ಮಾಡಿದರು.ಈ ವೇಳೆ ಮಾತನಾಡಿದ ಅವರು, ನಾನು ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಪ್ರವಾಸ ಮಾಡ್ತಿದ್ದೇನೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಸಾಕಷ್ಟು ಜನರು ಮನೆ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಬೆಳೆ ಕಳೆದುಕೊಂಡ ರೈತರ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಮಳೆಯಿಂದಾಗಿ ಉಂಟಾಗಿರುವ ಹಾನಿಯ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿ ಕೇಂದ್ರದಲ್ಲಿಂದಲೂ ಪರಿಹಾರ ನೀಡುವಂತೆ ಮನವಿ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿರವರು ಭರವಸೆ ನೀಡಿದರು.

ಈ ವೇಳೆ ಮಾಜಿ ಸಚಿವರು ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟೇಕರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಐಲಿಂಜಾನ್ ಮಠಪತಿ, ಅಶೋಕ್ ಕೊಡಗೆ ಶಾಂತಲಿಂಗ ಸಾಳಗಿ, ರಾಜಶೇಖರ ಜವಳೆ,

ದೇವೇಂದ್ರ ಸೋನಿ, ಲಲಿತಾ ಕರಂಜೆ, ಶಿವಪುತ್ರ ಮಾಳಿಗೆ, ಬಸವರಾಜ್ ಪಾಟೀಲ್ ಹಾರೂರಗೇರಿ, ರಾಜು ಚಿಂತಾಮಣಿ, ಸುದರ್ಶನ್ ಸುಂದರರಾಜ್, ಅಭಿ ಕಾಳೆ, ಬೊಮಗೊಂಡ ಚಿಟ್ಟಾವಾಡಿ, ರೇವಣಸಿದ್ದಪ್ಪ ಪಾಟೀಲ್, ಬಸವರಾಜ್ ಶಹಾಪೂರೆ, ಮಲ್ಲಿಕಾರ್ಜುನ ನೆಳಗೆ, ಪ್ರಶಾಂತ್ ವಿಶ್ವಕರ್ಮ, ಸಂಗು ಚಿದ್ರಿ, ಜಾಪೇಡ್ ಕಡ್ಯಾಳ, ತಾನಾಜಿ ತೋರಣೇಕರ್, ಮನೋಹರ್ ದಂಡೆ, ಅರುಣಕುಮಾರ್, ತರುಣ್ ನಾಗಮಾರಪಳ್ಳಿ ಸೇರಿದಂತೆ ಅನೇಕರಿದ್ದರು.


Spread the love

LEAVE A REPLY

Please enter your comment!
Please enter your name here