ಧರ್ಮಗ್ರಂಥಗಳಲ್ಲಿ, ವಾರದ ಕೆಲವು ವಿಶೇಷ ದಿನಗಳು ಉಗುರು ಕತ್ತರಿಸುವುದು, ಕ್ಷೌರ ಮತ್ತು ಶೇವಿಂಗ್ ಮಾಡಲು ಉತ್ತಮವೆಂದು ವಿವರಿಸಲಾಗಿದೆ. ಇದರೊಂದಿಗೆ, ನಮ್ಮ ಧರ್ಮಗ್ರಂಥಗಳಲ್ಲಿ ಉಗುರು, ಗಡ್ಡ ಮತ್ತು ಕೂದಲನ್ನು ಕತ್ತರಿಸುವುದನ್ನು ಮಂಗಳಕರವೆಂದು ಪರಿಗಣಿಸದ ಕೆಲವು ದಿನಗಳಿವೆ.
ಎಸ್, ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಉಗುರು ಕತ್ತರಿಸುವ ಬಗ್ಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಇದರಲ್ಲಿ ಶುಭ ಮತ್ತು ಅಶುಭ ದಿನಗಳ ಬಗ್ಗೆಯೂ ಸೂಚಿಸಲಾಗಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಹಣ ಮತ್ತು ಗೌರವ ನಷ್ಟವಾಗಬಹುದು. ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಸಾಲ ಹೆಚ್ಚಾಗಿ ಬಡತನ ತಾಂಡವವಾಡುವುದು.
ಈ ದಿನಗಳಲ್ಲಿ ಉಗುರು ಕತ್ತರಿಸಬೇಡಿ :
ಹಿಂದೂ ಧರ್ಮದ ಪ್ರಕಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಉಗುರು ಕತ್ತರಿಸುವುದು ತುಂಬಾ ಅಶುಭ ಎಂದು ಹೇಳಲಾಗುತ್ತದೆ. ಇದು ಬಡತನ, ಸಾಲ, ನಕಾರಾತ್ಮಕತೆ ಮತ್ತು ಗ್ರಹ ದೋಷಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ, ಭಾನುವಾರ ಮತ್ತು ಸೋಮವಾರದಂದು ಉಗುರುಗಳನ್ನು ಕತ್ತರಿಸುವುದು ಒಳ್ಳೆಯದಲ್ಲ.
ಇನ್ನು ಯಾವ ಹೊತ್ತಿನಲ್ಲಿ ಉಗುರು ಕತ್ತರಿಸಬೇಕು ಎಂದು ನೋಡುವುದಾದರೆ ಸಂಜೆ ಅಥವಾ ರಾತ್ರಿ ಹೊತ್ತಲ್ಲಿ ಎಂದಿಗೂ ಉಗುರು ಕತ್ತರಿಸಬಾರದು. ಸೂರ್ಯಾಸ್ತದ ಸಮಯದಲ್ಲಿ ಮತ್ತು ರಾತ್ರಿ ವೇಳೆ ಉಗುರುಗಳನ್ನು ಕತ್ತರಿಸುವುದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಲಕ್ಷ್ಮೀ ದೇವಿ ಕೋಪಗೊಂಡರೆ ಜೀವನದಲ್ಲಿ ಎಲ್ಲವೂ ಬದಲಾಗುವುದು. ಅಂದ ಹಾಗೆ ಭಾನುವಾರವೂ ಉಗುರುಗಳನ್ನು ಕತ್ತರಿಸಬಾರದು, ಅದು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.
ಉಗುರು ಕತ್ತರಿಸಲು ಶುಭ ದಿನಗಳು :
ಹಿಂದೂ ಧರ್ಮದಲ್ಲಿ, ಬುಧವಾರ ಮತ್ತು ಶುಕ್ರವಾರ ಉಗುರು ಕತ್ತರಿಸಲು ಅತ್ಯಂತ ಮಂಗಳಕರ ದಿನವೆಂದು ಹೇಳಲಾಗಿದೆ. ಇದು ಸಂಪತ್ತು, ಸೌಂದರ್ಯ ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಶುಕ್ರವಾರ ಉಗುರು ಮತ್ತು ಕೂದಲನ್ನು ಕತ್ತರಿಸಲು ಕೂಡಾ ಒಳ್ಳೆಯ ದಿನವೆಂದು ಪರಿಗಣಿಸಲಾಗಿದೆ.



