ಕೊತ್ತಲವಾಡಿ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಪುಷ್ಪ ಅವರು ತಮ್ಮ ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರಿಗೆ ಪೇಮೆಂಟ್ ಕೊಡದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಟಿಯ ತಾಯಿ ಆರೋಪ ಮಾಡಿದ್ದಾರೆ.
ಕೆಲಸ ಮಾಡಿದ ಮಗಳ ಸಂಭಾವನೆಗಾಗಿ ನಿರ್ದೇಶಕರ ಬಳಿ ಸಹ ನಟಿ ಸ್ವರ್ಣ ತಾಯಿ ಗೋಳಾಡಿದ್ದಾರೆ. ನಿಮಗೆ ಕೆಲಸ ಮಾಡಿದಕ್ಕೆ ಪೇಮೆಂಟ್ ಕೋಡೋದಕ್ಕೆ ಆಗಲ್ವಾ? ನನ್ನಮಗಳು ನಿಮ್ಮನ್ನ ನಂಬಿಕೊಂಡು ಮೂರು ತಿಂಗಳು ಕೆಲಸ ಮಾಡಿದ್ದಾಳೆ. ನನ್ನ ಮಗಳಿಗೆ ಅಪ್ಪ ಇಲ್ಲ. ನಾನೆ ಅವಳನ್ನು ಎಲ್ಲಾ ನೋಡಿಕೊಳ್ಳಬೇಕು ಎಂದಿದ್ದಾರೆ.
ನನಗೆ ಗಂಡ ಇಲ್ಲ. ನಾನು ಅವಳನ್ನು ನಂಬಿಕೊಂಡು ಇದ್ದೀನಿ. ಬಡವರ ಮಕ್ಕಳ ಹಣ ಕೊಡದೆ ಉದ್ದಾರ ಆಗ್ತೀರಾ? ನನ್ನ ಮಗಳು ಬೆಳಗ್ಗೆಯಿಂದ ಸ್ನಾನ ಮಾಡಿ ಏನು ತಿನ್ನದೆ ಮಲಗಿದ್ದಾಳೆ ಎಂದು ನಟಿಯ ತಾಯಿ ಕೊತ್ತಲವಾಡಿ ಸಿನಿಮಾದ ನಿರ್ದೇಶಕ ಶ್ರೀ ರಾಜ್ ಜೊತೆ ಗೊಳಾಡಿದ್ದಾರೆ.
ಇಂದು ಬೆಳಗ್ಗೆ ಕೂಡ ಮಹೇಶ್ ಗುರು ಎಂಬ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದು ಪೇಮೆಂಟ್ ಮಾಡಿಲ್ಲ ಎಂದು ಆರೋಪಿಸಿದ್ದರು. ಸುಮಾರು ಮೂರು ತಿಂಗಳು ಕೆಲಸ ಮಾಡಿದೆ. ಆದರೆ ಸಂಬಂಳ ಬಂದಿಲ್ಲ. ಕೇಳಿದ್ರೆ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು.