ವಿಜಯಸಾಕ್ಷಿ ಸುದ್ದಿ, ಗದಗ
Advertisement
ಜನರಿಂದ ಹಣ ಪಡೆದು ಓಸಿ ನಂಬರ್ ಬರೆದುಕೊಡುತ್ತಿದ್ದ ಸಾರಿಗೆ ಸಂಸ್ಥೆಯ ನಿವೃತ್ತ ನೌಕರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ಅವರಿಂದ ನಗದು 1850 ರೂ.ಗಳನ್ನು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ.
ಮುಂಡರಗಿಯ ಜಾಗೃತ ಸರ್ಕಲ್ ಬಳಿ ಓಪನ್ -ಕ್ಲೋಸ್ ಹೆಸರಿನಲ್ಲಿ ಜನರಿಂದ ಹಣ ಪಡೆದು ಚೀಟಿ ಬರೆದುಕೊಡುತ್ತಿದ್ದ ರವಿ ಫಕ್ಕೀರಪ್ಪ ಹೂಗಾರ, ನಾಗಪ್ಪ ತಿಪ್ಪಣ್ಣ ಕಲ್ಲಳ್ಳಿ ಹಾಗೂ ಯಚ್ಚರಪ್ಪ ಶಂಕರಪ್ಪ ಬಡಿಗೇರ ಎಂಬುವವರನ್ನು ಮುಂಡರಗಿ ಠಾಣೆಯ ಪಿಎಸ್ಐ ನೂರಜಾನ್ ಸಬರ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.