ಹಿರಿಯೂರು: ಹೊತ್ತಿ ಉರಿದ ನೆಕ್ಸಾನ್ ಕಾರು; ಯುವಕ ಸಜೀವ ದಹನ!

0
Spread the love

ಚಿತ್ರದುರ್ಗ:- ಹಿರಿಯೂರಿನ ಅರಳಿಕಟ್ಟೆ ಬಳಿ ಕಾರಿಗೆ ಆಕಸ್ಮಿಕ ಬೆಂಕಿ‌ ತಗುಲಿ ಕಾರಿನಲ್ಲಿದ್ದ ಯುವಕ ಸಜೀವ ದಹನಗೊಂಡ ಘಟನೆ ನಡೆದಿದೆ.

Advertisement

ಸಜೀವದಹನಗೊಂಡ ಯುವಕನನ್ನು ಅರಳಿಕಟ್ಟೆಯ ಸಿದ್ದೇಶ್ ಎಂದು ಗುರುತಿಸಲಾಗಿದೆ. ಅರಳಿಕಟ್ಟೆಗೆ ವಾಪಾಸ್ಸು ಹೋಗುವಾಗ ಈ ದುರ್ಘಟನೆ ನಡೆದಿದ್ದು, ನೆಕ್ಸಾನ್ ಕಾರು ಹೊತ್ತಿ ಉರಿದಿದೆ. ಬೆಂಕಿ ಹೊತ್ತಿ ಉರಿದ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಹೊತ್ತಿ ಉರಿಯುತ್ತಿರುವ ಕಾರಿನ ಬೆಂಕಿ ನಂದಿಸಲು ಗ್ರಾಮಸ್ಥರು ನೀರಾಕಿ ಪ್ರಯತ್ನಿಸಿದ್ದಾರೆ.

ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here