ನಟನೆಯಿಂದ ನಿವೃತ್ತಿ ಘೋಷಿಸಿದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್

0
Spread the love

ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್‌ ವೃತ್ತಿ ಜೀವನದ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗೆ ನಾನಾ ಪಾಟೇಕರ್ ಹಾಗೂ ಮಕರಂದ್ ಅನಸ್ಪುರೆ ಅವರ ‘ನಾಮ್ ಫೌಂಡೇಶನ್’ ಹತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ನಾನಾ ಪಾಟೇಕರ್‌ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.

Advertisement

‘ನಾನು ಈಗ ನಿವೃತ್ತಿ ಹೊಂದಲು ಬಯಸುತ್ತೇನೆ. ನಾನು ನಾಟಕಗಳು ಮತ್ತು ಚಲನಚಿತ್ರಗಳಿಂದ 99 ಪ್ರತಿಶತ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ. ಒಳ್ಳೆಯ ಕಥೆ ಸಿಕ್ಕರ ನಾನು ಅದನ್ನು ಮಾಡುತ್ತೇನೆ. ಈಗ ನನ್ನ ಜೀವನವನ್ನು ನನ್ನದೇ ಆದ ರೀತಿಯಲ್ಲಿ ಬದುಕಲು ಬಿಡಿ’ ಎಂದು ನಾನಾ ಪಾಟೇಕರ್‌ ಹೇಳಿದರು.

“ನಾನು 13ನೇ ವಯಸ್ಸಿನಿಂದಲೇ ಕೆಲಸ ಮಾಡುತ್ತಾ ಬಂದಿದ್ದೇನೆ. ಈಗ ನನಗೆ 75 ವರ್ಷ. ಇಷ್ಟು ವರ್ಷಗಳು ಕೆಲಸ ಮಾಡಿದ ಬಳಿಕ, ಇನ್ನು ಮುಂದೆ ನಾನು ವಿಭಿನ್ನವಾದದ್ದನ್ನು ಮಾಡಲು ಬಯಸುತ್ತೇನೆ – ಅಂದರೆ, ನನಗೆ ಇಷ್ಟವಿರುವ, ಹೃದಯದಿಂದ ಬೇಕಾದದ್ದನ್ನು. ಇಷ್ಟು ಕಾಲ ಅನೇಕ ಜವಾಬ್ದಾರಿಗಳ ನಡುವೆ ಜೀವನ ನಡೆಸಿದ್ದೇನೆ, ಆದರೆ ಈಗ ಸಮಯ ಬಂದಿದೆ, ನಾನೇನನ್ನು ಬಯಸುತ್ತೇನೆ ಅನ್ನೋದನ್ನು ಕೇಳಿಕೊಳ್ಳಲು.

ಜನವರಿ 1ರಂದು ನಾನು 75ನೆ ವರ್ಷಕ್ಕೆ ಕಾಲಿಡುತ್ತೇನೆ. ಆ ದಿನದ ನಂತರ, ನಾನು ನಾಟಕ ಮತ್ತು ಚಲನಚಿತ್ರ ಕ್ಷೇತ್ರದಿಂದ ನಿವೃತ್ತಿ ಪಡೆಯುತ್ತೇನೆ. ನಿವೃತ್ತಿಯ ನಂತರ, ನಾನು ನನ್ನ ಸಮಯವನ್ನು ಹಳ್ಳಿಗಳ ಜನರ ಸೇವೆಗೆ ಮೀಸಲಿಡುತ್ತೇನೆ.

ನಾಮ್ ಫೌಂಡೇಶನ್ ಈಗ ಮಕರಂದ್ ಅವರ ಹೊಣೆ. ನಾನು ಅವನು ಏನು ಹೇಳುತ್ತಾನೋ ಅದನ್ನು ಕೇಳುತ್ತೇನೆ, ಅವನು ತೆಗೆದುಕೊಳ್ಳುವ ಕ್ರಮಗಳಿಗೆ ಬೆಂಬಲ ನೀಡುತ್ತೇನೆ. ಅವನ ಬೆನ್ನು ತಟ್ಟುತ್ತೇನೆ ಎಂದು ನಾನಾ ಪಾಟೇಕರ್‌ ಹೇಳಿದ್ದಾರೆ.

“ಮಕರಂದ್ ಈಗ ಗ್ರಾಮದಲ್ಲಿ ನನಗಿಂತಲೂ ಹೆಚ್ಚು ಪ್ರಸಿದ್ಧರು. ಅವರು ಹಳ್ಳಿಯ ಜನರ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. ನಾಮ್ ಫೌಂಡೇಶನ್ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದದ್ದು ನನಗೆ ಅನಂದದ ವಿಷಯ. ನಾವು ಈ ಪ್ರತಿಷ್ಠಾನವನ್ನು ಪ್ರಾರಂಭಿಸಿದದ್ದು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ. ಇದು ಜನರಿಂದ ಜನರಿಗಾಗಿ ಹುಟ್ಟಿದ ಒಂದು ಆಂದೋಲನ. ನಾವು ಎಲ್ಲರೂ ಸೇರಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ.”

“ನಾಮ್ ಪ್ರತಿಷ್ಠಾನದ ಮೂಲಕ ಈಗಾಗಲೇ 60 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಸಂಸ್ಥೆಯ ಕೆಲಸದಿಂದ ಸಾವಿರಾರು ರೈತರು ತಮ್ಮ ಬದುಕಿನಲ್ಲಿ ನಿಜವಾದ ಬದಲಾವಣೆ ಕಂಡಿದ್ದಾರೆ ಎಂದು ನಾನಾ ಪಾಟೇಖರ್‌ ಖುಷಿ ಹಂಚಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here