ಏಡ್ಸ್ ಜಾಗೃತಿಗಾಗಿ ಬೈಕ್ ರ‍್ಯಾಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತೀವ್ರಗೊಳಿಸಿದ ಎಚ್‌ಐವಿ ಏಡ್ಸ್ ಪ್ರಚಾರಾಂದೋಲನ ಬೈಕ್ ರ‍್ಯಾಲಿಗೆ ಡಿಟಿಓ ಡ್ಯಾಪ್ಕೋ ಅಧಿಕಾರಿ ಡಾ. ಅರುಂಧತಿ ಕೆ ಬುಧವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.

Advertisement

ಬೈಕ್ ರ‍್ಯಾಲಿಯು ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಟಿಪ್ಪು ಸರ್ಕಲ್, ಮುಳಗುಂದ ನಾಕಾ, ಜುಮ್ಮಾ ಮಸೀದಿ, ಟಾಂಗಾ ಕೂಟ, ಮಹೇಂದ್ರಕರ ಸರ್ಕಲ್, ಗಾಂಧಿ ಸರ್ಕಲ್, ಪೋಸ್ಟ್ ಆಫೀಸ್ ಮೂಲಕ ಸಾಗಿ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಜಿಲ್ಲಾ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ, ಆರೋಗ್ಯ ಇಲಾಖೆಯ ಎನ್‌ಟಿಇಪಿ, ಡ್ಯಾಪ್ಕೋ, ಐಸಿಟಿಸಿ, ಎಆರ್‌ಟಿ ಸಿಬ್ಬಂದಿ, ರಕ್ಷಣೆ, ಸೃಷ್ಟಿ ಸಂಕುಲ, ನವಚೇತನ ಮತ್ತು ಚೈತನ್ಯ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here