ಹಾಸನ:- ಕಲ್ಲಿನಿಂದ ಹಲ್ಲೆ ಮಾಡಿ ಅಪ್ರಾಪ್ತನೋರ್ವ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅರಸೀಕೆರೆಯ ಬಂದೂರು ಗ್ರಾಮದಲ್ಲಿ ಜರುಗಿದೆ.
43 ವರ್ಷದ ಮೀನಾಕ್ಷಮ್ಮ ಕೊಲೆಯಾದ ಮಹಿಳೆ. ಹತ್ಯೆಗೈದ ಬಾಲಕ ಚಿಕ್ಕಂದಿನಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು, ಮೀನಾಕ್ಷಮ್ಮರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಅವರೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಸೆ.15ರಂದು ಬಂದೂರು ಗ್ರಾಮದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದ ಮಹಿಳೆಯ ಜೊತೆ ಬಾಲಕ ಪುನಃ ಜಗಳವಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಮೀನಾಕ್ಷಮ್ಮ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಸೆ.16 ರಂದು ತಮ್ಮ ತಾಯಿಯದ್ದು ಅನುಮಾನಸ್ಪದ ಸಾವು ಎಂದು ಅವರ ಪುತ್ರ ದಿನೇಶ್ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಜಾವಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



