ನಿಮಗೆ ಗೊತ್ತೆ.? ಮಲ್ಲಿಗೆಯ ಸುವಾಸನೆಯಲ್ಲಿದೆ ಆರೋಗ್ಯ ಪ್ರಯೋಜನಗಳು!

0
Spread the love

ಮಲ್ಲಿಗೆ (Jasmine) ಹೆಸರು ಕೇಳಿದರೆ ಹೆಣ್ಣುಮಕ್ಕಳ ಮುಖದಲ್ಲಿ ನಗು ಮೂಡುತ್ತದೆ. ಮಲ್ಲಿಗೆ ಹೂವು ಮುಡಿಯುವುದನ್ನು ಅನೇಕರೂ ಇಷ್ಟಪಡುತ್ತಾರೆ. ಆದರೆ ಈ ಹೂವಿನ ಸುವಾಸನೆ ಕೇವಲ ಮನಸಿಗೆ ಹರ್ಷ ತರುವುದಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳು ಕೂಡ ಇವೆ ಎಂಬುದು ಬಹುತೇಕ ಮಂದಿಗೆ ತಿಳಿದಿಲ್ಲ.

Advertisement

ಮಲ್ಲಿಗೆಯ ಸುವಾಸನೆಯ ಆರೋಗ್ಯ ಲಾಭಗಳು:

  • ಒತ್ತಡ ಕಡಿಮೆ: ಮಲ್ಲಿಗೆಯ ಘಮ ಮನಸ್ಸನ್ನು ಶಾಂತಗೊಳಿಸಿ ಆತಂಕವನ್ನು ತಗ್ಗಿಸುತ್ತದೆ.

  • ಉತ್ತಮ ನಿದ್ರೆ: ನಿದ್ರಾಹೀನತೆಯಿಂದ ಬಳಲುವವರಿಗೆ ಇದು ಸಹಜ ಚಿಕಿತ್ಸೆ. ಮಲ್ಲಿಗೆಯ ಸುವಾಸನೆ ನಿದ್ರೆಯನ್ನು ಉತ್ತೇಜಿಸುತ್ತದೆ.

  • ಖಿನ್ನತೆ ನಿವಾರಣೆ: ನಿಯಮಿತವಾಗಿ ಘಮ ತೆಗೆದುಕೊಳ್ಳುವುದರಿಂದ ಮನಸ್ಥಿತಿ ಹಗುರವಾಗಿ, ಖಿನ್ನತೆಯಿಂದ ಮುಕ್ತವಾಗಲು ಸಹಕಾರಿಯಾಗುತ್ತದೆ.

  • ಮೆದುಳಿನ ಚಟುವಟಿಕೆ ಸುಧಾರಣೆ: ಮಲ್ಲಿಗೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳು ಏಕಾಗ್ರತೆ, ಸ್ಮರಣೆ ಶಕ್ತಿ ಹೆಚ್ಚಿಸಿ ಮೆದುಳಿನ ಕಾರ್ಯಗಳನ್ನು ಬಲಪಡಿಸುತ್ತವೆ.

ಮಲ್ಲಿಗೆಯ ಸುವಾಸನೆ ಮನಸ್ಸು ಮತ್ತು ದೇಹಕ್ಕೆ ಶಾಂತಿ ನೀಡುವುದಲ್ಲದೆ, ಆರೋಗ್ಯ ಕಾಪಾಡುವ ಸ್ವಾಭಾವಿಕ ಔಷಧಿ ಎಂದೂ ಹೇಳಬಹುದು.


Spread the love

LEAVE A REPLY

Please enter your comment!
Please enter your name here