ಬೆಂಗಳೂರು: ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶರಣ ಪ್ರಕಾಶ್ ಪಾಟೀಲ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
Advertisement
ಈ ಹಿಂದೆ ಬಿ.ಆರ್.ಪಾಟೀಲ್ ಆಳಂದದಲ್ಲಿ ಅಕ್ರಮ ಆಗಿತ್ತು ಅಂತ ಕಂಪ್ಲೇಂಟ್ ಕೊಟ್ಟಿದ್ದರು. ನಾನು, ಪ್ರಿಯಾಂಕ್ ಎಲೆಕ್ಷನ್ ಕಮೀಷನ್‌ಗೆ ದೂರು ಕೊಟ್ಟಿದ್ದೆವು. ವೋಟ್ ಎನ್ ರೋಲ್ ಮಾಡೋಕೆ ದೂರು ಕೊಡಲಾಗಿತ್ತು. ಅಕ್ರಮದ ಆರೋಪ ಮಾಡಿದಾಗ ಅದನ್ನ ಸ್ಟಾಪ್ ಮಾಡಿದ್ದರು. ಆದರೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿಲ್ಲ. ರಾಹುಲ್ ಗಾಂಧಿಯವರ ಮಾತು ಸತ್ಯವಿದೆ ಎಂದು ಹೇಳಿದ್ದಾರೆ.