HomeEntertainmentಸಿನಿಮಾ ಸೆಟ್‌ ನಲ್ಲಿ ಕುಸಿದು ಬಿದ್ದು ಖ್ಯಾತ ತಮಿಳು ನಟ ನಿಧನ

ಸಿನಿಮಾ ಸೆಟ್‌ ನಲ್ಲಿ ಕುಸಿದು ಬಿದ್ದು ಖ್ಯಾತ ತಮಿಳು ನಟ ನಿಧನ

For Dai;y Updates Join Our whatsapp Group

Spread the love

ತಮಿಳು ಸಿನಿರಂಗದ ಖ್ಯಾತ ನಟ ರೋಬೋ ಶಂಕರ್ ಸಣ್ಣ ವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಧನುಶ್, ವಿಜಯ್, ವಿಶಾಲ್‌ ಸೇರಿದಂತೆ ಹಲವು ಸ್ಟಾರ್‌ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ರೋಬೋ ಶಂಖರ್‌ ಕೇವಲ 46ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿರುವುದು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ತನ್ನ ವಿಶಿಷ್ಟ ಹಾಸ್ಯಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದ ಶಂಕರ್ ಜಾಂಡೀಸ್‌ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಬಹುಕಾಲದಿಂದ ಜಾಂಡೀಸ್ ಸಮಸ್ಯೆಯಿಂದ ಬಳಲುತ್ತಿದ್ದ ರೋಬೋ ಶಂಕರ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 16ರಂದು ಶೂಟಿಂಗ್ ಸೆಟ್ನಲ್ಲೇ ಅವರು ಮೂರ್ಚೆಹೋಗಿದ್ದು, ನಂತರ ಕರುಳಿನಲ್ಲಿ ರಕ್ತಸ್ರಾವ ಕಂಡುಬಂದಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ರೋಬೋ ಶಂಕರ್‌ ನಿಧನಕ್ಕೆ ನಟ ಕಮಲ್ ಹಾಸನ್, ರಾಧಿಕಾ ಶರತ್ ಕುಮಾರ್, ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಜಾಂಡೀಸ್‌ ಸಮಸ್ಯೆಯ ಹಿನ್ನೆಲೆಯಲ್ಲಿ ರೋಬೋ ಶಂಕರ್‌ ಹಲವು ಸಮಯದಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಅಲ್ಲದೆ ತೀರಾ ಸಣ್ಣಗಾಗಿದ್ದರು ಕೂಡ. ಆದರೆ ಇತ್ತೀಚೆಗೆ ಮತ್ತೆ ಸಿನಿಮಾಗಳ ಕೆಲಸಗಳಲ್ಲಿ ಆಕ್ಟೀವ್‌ ಆಗಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಸಿನಿಮಾರಂಗದಲ್ಲಿ ಮತ್ತೆ ಸದ್ದು ಮಾಡಬೇಕು ಎಂದು ಬಂದಿದ್ದ ರೋಬೋ ಶಂಕರ್‌ ಅವರನ್ನು ಜಾಂಡೀಸ್‌ ಬಲಿ ತೆಗೆದುಕೊಂಡಿದೆ. ಇನ್ನೂ ರೋಬೋ ಶಂಕರ್‌ ಪತ್ನಿ ಪ್ರಿಯಾಂಕಾ ಹಾಗೂ ಮಗಳು ಇಂದ್ರಜಾ ಅವರನ್ನು ಅಗಲಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!