ಶ್ರೀ ವೀರಭದ್ರೇಶ್ವರ ಪುರಾಣವು ವಿಶಿಷ್ಟವಾಗಿದೆ: ಮಲ್ಲಿಕಾರ್ಜುನ ಶ್ರೀಗಳು

0
???????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಹಿರೇಮಠದ ಜಾತ್ರೆಯು ನವೆಂಬರ್ 9ರಿಂದ 17ರವರೆಗೆ 9 ದಿನಗಳ ಕಾಲ ಜರುಗಲಿದೆ ಎಂದು ಹಿರೇಮಠದ ಪಟ್ಟಾಧ್ಯಕ್ಷರಾದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ತಿಳಿಸಿದರು.

Advertisement

ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಜಾತ್ರಾ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜಾತ್ರೆಯನ್ನು ಈ ಸಾರಿ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಆಚರಣೆ ಮಾಡೋಣ. ಪ್ರತಿ ವರ್ಷ ಪುರಾಣಿಕರನ್ನು ಕರೆಯಿಸಿ ಪುರಾಣವನ್ನು ಹೇಳಿಸುತ್ತಿದ್ದೆವು. ಬದಲಾಗಿ ಈ ವರ್ಷ ತಾವೇ ಶ್ರೀ ವೀರಭದ್ರೇಶ್ವರ ಪುರಾಣವನ್ನು ಹೇಳುವುದಾಗಿ ಶ್ರೀಗಳು ತಿಳಿಸಿದರು. ಇದರೊಂದಿಗೆ ಸಿದ್ಧಾಂತ ಶಿಖಾಮಣಿಯ ಕೆಲವಷ್ಟು ಅಂಶಗಳನ್ನು ಸಹ ನಿತ್ಯವೂ ಹೇಳುತ್ತ ಬರುವುದಾಗಿ ಹೇಳಿದರು.

ಪ್ರತಿವರ್ಷದಂತೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದಾಗಿ ತಿಳಿಸಿದ ಶ್ರೀಗಳು, ಕಳೆದ ಮಾರ್ಚ್-ಏಪ್ರಿಲ್‌ನಲ್ಲಿ ಮೊದಲ ಪರೀಕ್ಷೆಯಲ್ಲಿ ಪಾಸಾದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳನ್ನು ಇದಕ್ಕೆ ಪರಿಗಣಿಸುತ್ತಿದ್ದು, ಶೇ. 90 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದವರನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರನ್ನು ಸನ್ಮಾನಿಸುವ ವಿಚಾರವೂ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ವೇ.ಮೂ. ರುದ್ರಮುನಿ ಶಾಸ್ತ್ರಿಗಳು, ಡಾ. ಕೆ.ಬಿ. ಧನ್ನೂರ, ಡಿ.ಎ. ಅರವಟಗಿಮಠ, ಕೆ.ಎಸ್. ಕಳಕಣ್ಣವರ, ಡಾ. ಆರ್.ಕೆ. ಗಚ್ಚಿನಮಠ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಎಸ್.ಕೆ. ಪಾಟೀಲ, ಬಸವರಾಜ ಕಳಕಣ್ಣವರ, ಮಲ್ಲನಗೌಡ ಪಾಟೀಲ, ಸಿದ್ದಪ್ಪರಾಗಿ, ಸಕ್ರೆಪ್ಪ ಹಡಪದ, ಶಿವಪುತ್ರಪ್ಪ ಸಂಗನಾಳ, ಎಮ್.ಎಸ್. ದಢೇಸೂರಮಠ, ನಿಂಗನಗೌಡ ಲಕ್ಕನಗೌಡ್ರ, ಬಸಪ್ಪ ಮಡಿವಾಳರ, ರಮೇಶ ಕಳಕಣ್ಣವರ, ಪುಟ್ಟೇಶ ಕುಂಬಾರ, ಶಿವಯೋಗಿ ಜಕ್ಕಲಿ, ಖಾದರಬಾಷಾ ಹೂಲಗೇರಿ, ನಿಂಗಪ್ಪ ಕಣವಿ, ಶೇಕಪ್ಪ ಕೆಂಗಾರ ಮುಂತಾದವರು ಪಾಲ್ಗೊಂಡು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಈಶ್ವರ ಬೆಟಗೇರಿ ನಿರೂಪಿಸಿದರು. ಡಾ. ಎಲ್.ಎಸ್. ಗೌರಿ ವಂದಿಸಿದರು.

ಶ್ರೀ ವೀರಭದ್ರೇಶ್ವರ ಪುರಾಣವು ಅತ್ಯಂತ ವಿಶಿಷ್ಟಮಯ ಪುರಾಣವಾಗಿದೆ.
ಅದರಲ್ಲಿಬರುವ ಅನೇಕ ಮೌಲ್ಯಮಯ ವಿಚಾರಗಳನ್ನು ಎಲ್ಲರೂ ತಿಳಿಯಬೇಕಿದ್ದು, ತಾವೆಲ್ಲರೂ ತಪ್ಪದೇ ಪುರಾಣವನ್ನಾಲಿಸಲು ಬರಬೇಕೆಂದು ಮಲ್ಲಿಕಾರ್ಜುನ ಶ್ರೀಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here