ಚಿಕ್ಕಮಗಳೂರು:- ನಕಲಿ ಆಧಾರ್ ಕಾರ್ಡ್ ಬಳಸಿ ಹಿಂದೂ ಮಹಿಳೆ ಜತೆ ಲಾಡ್ಜ್ನಲ್ಲಿ ಮುಸ್ಲಿಂ ವ್ಯಕ್ತಿ ಲಾಕ್ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಜರುಗಿದೆ.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಮಾಗುಂಡಿಯ ಅಬ್ದುಲ್ ಸಮದ್ ಎನ್ನುವಾತ ಆಧಾರ್ ಕಾರ್ಡ್ ನಲ್ಲಿ ರಮೇಶ್ ಎಂದು ಎಡಿಟ್ ಮಾಡಿ ಶೃಂಗೇರಿ ಮಠದಲ್ಲಿ ರೂಮ್ ಪಡೆದುಕೊಂಡಿದ್ದಾನೆ. ಅದು ಒಬ್ಬನ್ನೇ ಹೋಗಿಲ್ಲ ಶೃಂಗೇರಿ ಮೂಲದ 38 ವರ್ಷದ ಮಹಿಳೆಯನ್ನು ತನ್ನ ಹೆಂಡತಿ ಎಂದು ಸುಳ್ಳು ಹೇಳಿ ರೂಮ್ ಪಡೆದುಕೊಂಡಿದ್ದಾನೆ. ಸದ್ಯ ಇಬ್ಬರನ್ನು ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಗಂಡ ಇಲ್ಲದಿದ್ದರಿಂದ ಹಿಂದೂ ಮಹಿಳೆ ಜೊತೆ ಅಬ್ದುಲ್ ಸಮದ್ ಸ್ನೇಹ ಬೆಳೆದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರ ನಡುವೆ ಸಂಬಂಧ ಇದ್ದು, ಅನುಮಾನ ಬಾರದಂತೆ ಅಬ್ದಲ್ ಎನ್ನುವ ಬದಲಿಗೆ ರಮೇಶ್ ಎಂದು ಆಧಾರ್ ಕಾರ್ಡ್ ಮಾಡಿಕೊಂಡು ಮಹಿಳೆಯನ್ನು ಶೃಂಗೇರಿ ಮಠದ ಲಾಡ್ಜ್ ಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಈ ಜೋಡಿ ಸಿಕ್ಕಿಬಿದ್ದಿದೆ.