ಗಮನ ಸೆಳೆದ ಬಿತ್ತುವ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಶ್ರೀಮಠದಲ್ಲಿ ನಡೆಯುತ್ತಿರುವ ನಾಲವತವಾಡ ಶ್ರೀ ವೀರೇಶ್ವರ ಶರಣರ ಪುರಾಣದಲ್ಲಿ ಬರುವ ಬಿತ್ತುವ ಸನ್ನಿವೇಶ ಬುಧವಾರ ವಿಜೃಂಭಣೆಯೊಂದಿಗೆ ನಡೆಯಿತು.

Advertisement

ಸ್ಥಳೀಯ ಶ್ರೀ ಬಸವೇಶ್ವರ ಭಜನಾ ಮೇಳದವರು ಎತ್ತುಗಳನ್ನು ವಿಶೇಷ ಅಲಂಕಾರದೊಂದಿಗೆ ಹೂಡಿಕೊಂಡು ಪೂಜೆ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವೈಭವದ ಮೆರವಣಿಗೆಯೊಂದಿಗೆ ಶ್ರೀಗಳವರ ಮಠವನ್ನು ತಲುಪಿದರು. ಬಳಿಕ ಶ್ರೀಮಠದಲ್ಲಿ ಬಿತ್ತುವ ಈ ಸನ್ನಿವೇಶವನ್ನು ನೈಜವಾಗಿ ಆಚರಿಸುವ ಮೂಲಕ ರೈತ ಸಮೂಹ ಗಮನ ಸೆಳೆದರು.

ಹಿಂದಿನ ರಾತ್ರಿ ಕೃಷಿ ಕೆಲಸಕ್ಕೆ ಬಳಸುವ ಸಲಕರಣೆಗಳಾದ ಕೂರಿಗೆಯನ್ನು ವೀರಪ್ಪ ಯಾವಗಲ್ಲ, ಬೆಳಸಲು ಕುಂಟಿಯನ್ನು ಮುತ್ತಪ್ಪ ಕೋರಿ ಹರಾಜು ಮಾಡುವ ವೇಳೆ ತಗೆದುಕೊಂಡಿದ್ದರು.
ಮಾರನೇ ದಿನ ಮಹಾಂತೇಶ ಮೆಣಸಗಿ ಇವರ ಎತ್ತುಗಳೊಂದಿಗೆ ವೀರಪ್ಪ ಯಾವಗಲ್ಲ ಬಿತ್ತನೆ ಮಾಡಿದರು. ಶಕುಂತಲಾ ಯಾವಗಲ್ಲ ಅಕ್ಕಡಿ ಹಾಕಿದರು. ಮುತ್ತಪ್ಪ ಕೋರಿ ಬೆಳಸಲು ಹೊಡೆದು ಧನ್ಯತೆ ಮೆರೆದರು.

ಈ ಸಂದರ್ಭದಲ್ಲಿ ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರಿಗಳು, ರೈತರಾದ ಶರಣಯ್ಯ ಹಿರೇಮಠ, ಶೇಖಣ್ಣ ಮೇಟಿ, ವೀರಣ್ಣ ಸಂಗಳದ, ಮಲ್ಲಣ್ಣ ಮೇಟಿ, ಗಣೇಶ ಯಾವಗಲ್ಲ, ಸುನೀಲ ಸಂಕನೂರ, ಶೇಖರ ಯಾವಗಲ್ಲ, ಕುಮಾರ ನರೇಗಲ್ಲ, ಮುತ್ತಪ್ಪ ಶ್ಯಾಶೆಟ್ಟಿ, ನಿಡಗುಂದಿಯ ಪರಸಪ್ಪ ತಳವಾರ, ಜಿಗಳೂರಿನ ಬಸವರಾಜ ಹಾಲಕೆರೆ, ತೋಟಗಂಟಿಯ ಅಣ್ಣಪ್ಪ ಕುರಡಗಿ, ನರೇಗಲ್ಲದ ಮಲ್ಲಪ್ಪ ಮಾವಿನಕಾಯಿ, ಕೋಟುಮಚಗಿಯ ಮುತ್ತಣ್ಣ ನೇಗಲಿ ಸುತ್ತಮುತ್ತಲಿನ ರೈತರು ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here