ಬೆಂಗಳೂರು:– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಪವರ್ ಸಮಸ್ಯೆ ಬಿಟ್ಟು ಬಿಡದೆ ಕಾಡುತ್ತಿದೆ. ಕಾಮಗಾರಿ ನೆಪದಲ್ಲಿ ಬೆಸ್ಕಾಂ ಕರೆಂಟ್ ಕಟ್ ಮಾಡುತ್ತಿದ್ದು, ಇದು ಸಿಟಿ ಮಂದಿಯ ತಲೆನೋವು ಹೆಚ್ಚು ಮಾಡಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಸೆಪ್ಟೆಂಬರ್ 20ರ ಶನಿವಾರ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಶೊಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್, ನೂರ್ ನಗರ, ಎಕ್ಸ್ ಸರ್ವಿಸ್ಮೆನ್ ಲೇಔಟ್, ಪೊಲೀಸ್ ಕ್ವಾಟ್ರಸ್, ಆರ್‌ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ಎಸ್ತರ್ ಹರ್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬರ್ಡ್ ಮತ್ತು ಬೆಂಚ್ ರಾಯಲ್‌ವುಡ್, ಅರ್ಕಾವತಿ ಲೇಔಟ್ ಥಣಿಸಂದ್ರ.
ಆರ್‌ಕೆ ಹೆಗಡೆ ನಗರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು, ಭಾರತೀಯ ಸಿ.ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.