ಬೆಂಗಳೂರು:- ಹಿರಿಯ ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ ಹೆಸರಲ್ಲಿ ಸೈಬರ್ ವಂಚಕರು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ.
ಸೈಬರ್ ವಂಚಕರ ವಿರುದ್ದ ಪೊಲೀಸರಿಗೆ ಮೇಜರ್ ಮಣಿವಣ್ಣನ್ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕಳೆದ 9 ತಿಂಗಳ ಹಿಂದೆಯೂ ಕೂಡ ಸೈಬರ್ ಖದೀಮರು ನಕಲಿ ಖಾತೆ ತೆರೆದಿದ್ದರು. ಆಗ ಪೊಲೀಸರಿಗೆ ಮೇಜರ್ ಮಣಿವಣ್ಣನ್ ದೂರು ನೀಡಿದ್ದರು. ಆಗ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಯಾವ ಕ್ರಮವೂ ಆಗಿರಲಿಲ್ಲ. ಕೇಸ್ ಆಗ್ತಿದ್ದಂತೆ ವಂಚಕರು ಅಕೌಂಟ್ ಡಿಆ್ಯಕ್ಟಿವೆಟ್ ಮಾಡಿದ್ದಾರೆ. ಈಗ ಮತ್ತೆ ನಾಲ್ಕೈದು ಫೇಸ್ಬುಕ್ ನಕಲಿ ಖಾತೆಗಳು ಆ್ಯಕ್ಟಿವ್ ಆಗಿದೆ. ಮಣಿವಣ್ಣನ್ ಫೋಟೋ ಬಳಸಿಕೊಂಡು ಖದೀಮರು ನಕಲಿ ಖಾತೆ ತೆರೆಯುತ್ತಿದ್ದು, ಆರೋಪಿಗಳ ಪತ್ತೆ ಮಾಡಿ ಅಕೌಂಟ್ ಡಿಆ್ಯಕ್ಟಿವೆಟ್ ಮಾಡುವಂತೆ ದೂರು ನೀಡಿದ್ದಾರೆ.
ನಕಲಿ ಖಾತೆ ತೆರೆದು ಫರ್ನಿಚರ್ ಮಾರಾಟದ ಹೆಸರಿನಲ್ಲಿ ಮೆಸೇಜ್ ಮಾಡುತ್ತಿದ್ದರು. ನಮ್ಮ ಸ್ನೇಹಿತರು ಸಿ.ಆರ್.ಪಿ.ಎಫ್ ನಲ್ಲಿ ಕೆಲಸ ಮಾಡ್ತಿದ್ದಾರೆ. ಅವರು ವರ್ಗಾವಣೆ ಆಗ್ತಿದ್ದಾರೆ ಫರ್ನಿಚರ್ ಮಾರಾಟ ಮಾಡ್ತಿದ್ದಾರೆ. ನಾನು ನೋಡಿದ್ದೇನೆ ಬೇಕಾದ್ರೆ ನೀವು ಖರೀದಿಸಬಹುದು ಅಂತ ಮಸೇಜ್ ಹಾಕಿದ್ದಾರೆ. ಹೀಗೆ ಇಬ್ಬರು ವ್ಯಕ್ತಿಗಳಿಗೆ ಮೋಸ ಮಾಡಿದ್ದಾರೆ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.