ಶಿವಾನಂದ ಮ್ಯಾಗೇರಿಯದ್ದು, ನನ್ನದು ದೈವಿಕ ಸಂಬಂಧ: ಸಂಸದ ಬೊಮ್ಮಾಯಿ

0
Spread the love

ಹಾವೇರಿ: ಸಮಾಜದಿಂದ ಏನು ತೆಗೆದುಕೊಂಡಿರುತ್ತೇವೊ ಅದನ್ನು ಸಮಾಜಕ್ಕೆ ಕೊಟ್ಟು ಹೋಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು, ಹೋಗುವಾಗ ನಮ್ಮ ಬದುಕಿನ ಬ್ಯಾಲೆನ್ಸ್ ಸೀಟ್ ಬ್ಯಾಲೆನ್ಸ್ ಆಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪಾಯ ಪಟ್ಟರು.

Advertisement

ಇಂದು ಶಿಗ್ಗಾಂವ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಶಿಗ್ಗಾಂವ ಮಂಡಳದ ನಿಕಟಪೂರ್ವ ಅಧ್ಯಕ್ಷರಾದ ಶಿವಾನಂದ ಮ್ಯಾಗೇರಿ ಅವರ 53 ನೇಯ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಕೋರಿ ಮಾತನಾಡಿದರು.

ಬದುಕಿನ ಪ್ರಯಾಣದಲ್ಲಿ ಹಲವಾರು ಜನ ಬಂದು ಹೋಗುತ್ತಾರೆ. ಆದರೆ, ಕೆಲವೇ ಕೆಲವು ಜನ ಕೊನೆವರೆಗೂ ಮನದಾಳದಲ್ಲಿ ಇರುತ್ತಾರೆ. ರಕ್ತ ಸಂಬಂಧಿಗಳೇ ಇರಬೇಕೆಂದೇನಿಲ್ಲ. ಈ ಪ್ರಯಾಣದಲ್ಲಿ ನಮ್ಮ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಬರುವ ನಮ್ಮ ಮಿತ್ರರು ನಮ್ಮ ಸಹೋದರರಾಗಿ ನಿಲ್ಲುತ್ತಾರೆ. ಅಗಾಧವಾದ ಪ್ರೀತಿಯಿಂದ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಅದು ಅದ್ಭುತವಾದ ಸಂಬಂಧ. ಶಬ್ದಕ್ಕೂ ನಿಲುಕದ ಸಂಬಂಧ. ಅದು ಬಹುತೇಕ ದೈವಿಕ ಸಂಬಂಧ. ಅಂತಹ ಸಂಬಂಧ ಶಿವಾನಂದ ಮ್ಯಾಗೇರಿ ಮತ್ತು ನನ್ನ ಸಂಬಂಧ ಎಂದು ಹೇಳಿದರು.

ಶಿವಾನಂದ ಮ್ಯಾಗೇರಿ ಅವರು ಮೊದಲು ಕುಂದಗೋಳ ಶಾಸಕ ಶಿವಳ್ಳಿಯವರ ಜೊತೆಗೆ ಇದ್ದರು. ಹಲವಾರು ಬಾರಿ ಅವರ ಭಾಷಣವನ್ನು ಇವರೇ ಮಾಡುತ್ತಿದ್ದರು. ನಾನು ಅಲ್ಲಿ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿಂದಲೇ ಇವರ ಗುರುತು ಪರಿಚಯ, ನಾನು ಶಿಗ್ಗಾವಿಗೆ ಬಂದು ಶಾಸಕನಾದ ಮೇಲೆ ನನ್ನ ಜೊತೆಗೆ ಸೇರಿದ. ಹಾಲು ಮತದ ಸಮಾಜದ ಜೊತೆಗೆ ವಿಶೇಷವಾದ ಸಂಬಂಧ ಇದೆ.

ಇತ್ತೀಚೆಗೆ ಲಿಂಗಾಯತರು, ಹಿಂದುಳಿದ ವರ್ಗದವರು, ಎಸ್ಪಿ ಎಸಿಯವರನ್ನು ಸಂಬಂಧ ಬೆಳೆಸಿಕೊಂಡಿದ್ದಾರೆ. ಇವನು ಕ್ಷೇತ್ರದಲ್ಲಿ ಬಹಳಷ್ಟು ಶಿಷ್ಯರನ್ನು ಹುಟ್ಟು ಹಾಕಿದ್ದಾನೆ. ಅವರಿಗೆ ನಾಯಕತ್ವ ಕೊಟ್ಟೆ ಸಾಹಿತ್ಯಕವಾಗಿ, ಪೌರಾಣಿಕವಾಗಿ, ಸಂಗೀತದಲ್ಲಿ, ರಾಜಕೀಯವಾಗಿ ಎಲ್ಲ ರಂಗದಲ್ಲಿಯೂ ಶಿಷ್ಯರನ್ನು ಹುಟುಹಾಕಿದ್ದಾನೆ ಎಂದರು.

ವರ್ಣರಂಜಿತ ಜೀವನ

ಮ್ಯಾಗೇರಿ ಜೀವನ ಬಹಳ ವರ್ಣರಂಜಿತ, ಅವರ ಜೀವನೋತ್ಸಾಹ ಬಹಳ ಅದ್ಭುತವಾಗಿದೆ. ನನ್ನ ಜೊತೆ ಪ್ರಚಾರಕ್ಕೆ ಬಂದಾಗ ಎಲ್ಲಿಯಾದರೂ ಭಜನೆ ನಡೆಯುತ್ತಿದ್ದರೆ ಭಜನೆ ಮಾಡುವುದು, ದೇವಿ ಪುರಾಣಕ್ಕೆ ಹೋಗುವುದು. ಸರಸ್ವತಿ ಅವನ ನಾಲಿಗೆ ಮೇಲೆ ಕುಳಿತಿದ್ದಾಳೆ. ರಾಜ್ಯ ಪ್ರಶಸ್ತಿಗೆ ಮೀರಿರುವ ಪ್ರತಿಭೆ ಶಿವಾನಂದ ಮ್ಯಾಗೇರಿ, ಚಾರಿತ್ಯವಂತ, ನೀತಿವಂತ್ರ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬನ್ನಿಸಬೇಡ, ಇದಿರು ಹಳಿಯಲುಬೇಡ ಅಂತ ಬಸವಣ್ಣ ಹೇಳಿದಂತೆ ಇದ್ದಾನೆ. ಬಡತನದಿಂದ ಬಂದರೂ ಅವನ ಕ್ರಿಯಾಶೀಲತೆಗೆ ಯಾವುದೇ ಬಡತನ ಇರಲಿಲ್ಲ. ಪ್ರತಿಭೆ ಯಾರ ಆಸ್ತಿಯೂ ಅಲ್ಲ. ರೈತರು ಬಹಳ ದೊಡ್ಡ ಪ್ರತಿಭಾವಂತರು. ರೈತರು ಬಿತ್ತುವಾಗ, ಒಕ್ಕುವಾಗ ಹಾಡು ಹಾಡುತ್ತಾರೆ, ಹೆಣ್ಣು ಮಕ್ಕಳು ಬೀಸುವಾಗ ಉತ್ತಮವಾಗಿ ಹಾಡುತ್ತಾರೆ ಎಂದರು.

ಮ್ಯಾಗೇರಿ ಋಣದಲ್ಲಿದ್ದೇನೆ

ಅದ್ಭುತವಾಗಿರುವ ಜ್ಞಾನ ಶಿವಾನಂದ ಮ್ಯಾಗೇರಿಯಲ್ಲಿದೆ. ಅದೇ ಅವನ ಭಂಡಾರ, ಅವನಿಗೆ ಮಡಿವಂತಿಕೆ ಇಲ್ಲ. ಈ ತಾಲೂಕಿನಲ್ಲಿ ಏನೇನು ಕೆಲಸ ಆಗಿದೆ ಎಂದು ಎಲ್ಲವನ್ನೂ ಹೇಳುತ್ತಾನೆ. ನನ್ನ ಮೇಲೆ ಅವನಿಗೆ ಬಹಳ ಪ್ರೀತಿ. ಒಂದು ರೀತಿಯಲ್ಲಿ ಅವನು ನನ್ನ ಮೇಲೆ ಪ್ರೀತಿ ಇಟ್ಟು ನಡೆದುಕೊಂಡಿದ್ದು ನೋಡಿದಾಗ ಮ್ಯಾಗೇರಿಯ ಋಣದಲ್ಲಿ ನಾನಿದ್ದೇನೆ ಎಂದು ಅನಿಸುತ್ತದೆ.

ಯಾರೂ ಅಷ್ಟೊಂದು ಮಾಡುವುದಿಲ್ಲ. ಈಗ ಅವನ ಋಣ ತೀರಿಸಲು ಸಾಧ್ಯವಿಲ್ಲ. ಮ್ಯಾಗೇರಿ ಜೊತೆಗೆ ಅತಿ ಹೆಚ್ಚು ಸಮಯ ಕಳಿಯಬೇಕು ಅನಿಸುತ್ತದೆ. ವ್ಯಕ್ತಿ ಸ್ಥಾನ ಮಾನದಿಂದ ದೊಡ್ಡವನಾಗುವುದಿಲ್ಲ. ನಡೆ ನುಡಿಯಿಂದ ದೊಡ್ಡವನಾಗುತ್ತಾನೆ. ನಾನು ಬಹುತೇಕ ಶಾಸಕ, ಮಂತ್ರಿ, ಸಿಎಂ ಆಗಿದ್ದಾಗಿನಿಗಿಂತ ಈಗ ಅತಿ ಹೆಚ್ಚು ಪ್ರೀತಿ ಸಿಗುತ್ತಿದೆ. ಬಹಳ ಜನ ಹಿರಿಯರು ಬಂದು ಒಂದು ನಿಮಿಷ ಮೌನವಾಗಿ ನಿಲ್ಲುತ್ತಾರೆ.

ಪೀತಿ ವಿಶ್ವಾಸ ಮನುಷ್ಯನ ಸಹಜವಾದ ಗುಣ. ಅದನ್ನು ಬಿಟ್ಟು ನಾವು ಬಹಳ ವ್ಯವಹಾರಿಕ ಜೀವನ ನಡೆಸುತ್ತೇವೆ. ಬದುಕಿನಲ್ಲಿ ಆಯ್ಕೆ ಇದೆ. ಲಾಭ ನಷ್ಟ ಆಯ್ಕೆ ಮಾಡಬೇಕೊ, ಪಾಪ ಪುಣ್ಯ ಆಯ್ಕೆ ಮಾಡಬೇಕೊ. ಯಾರಿಗೂ ನಷ್ಟ ಬೇಕಿಲ್ಲ. ಲಾಭದಲ್ಲಿಯೂ ಪುಣ್ಯ ಗಳಿಸುವ ಶಕ್ತಿ, ಯುಕ್ತಿ ಪ್ರತಿಯೊಬ್ಬರೂ ರೂಡಿಸಿಕೊಂಡಾಗ ಆ ವ್ಯಕ್ತಿ ಪರಿಪೂರ್ಣ ಆಗುತ್ತಾನೆ. ಮ್ಯಾಗೇರಿ ಅತಿ ಹೆಚ್ಚು ಪುಣ್ಯ ಗಳಿಸಿದ್ದಾನೆ. ತಕ್ಕ ಮಟ್ಟಿಗೆ ಲಾಭವಾಗಿದೆ. ಪುಣ್ಯವಂತ, ಹೃದಯವಂತ, ಭಾಗ್ಯವಂತ ಶಿವಾನಂದ ಮ್ಯಾಗೇರಿ ಎಂದರು.


Spread the love

LEAVE A REPLY

Please enter your comment!
Please enter your name here