ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2025-26ನೇ ಶೈಕ್ಷಣಿಕ ವರ್ಷದ ಗದಗ ತಾಲೂಕು ಮಟ್ಟದ ‘ಎ’ ವಲಯದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವೈಯಕ್ತಿಕ ಆಟೋಟಗಳಲ್ಲಿ ಈರಣ್ಣ ಕಟಗಿ ಎತ್ತರ ಜಿಗಿತದಲ್ಲಿ ಪ್ರಥಮ, ಜಾವಿದ್ ಕಾತರಕಿ ಗುಂಡು ಎಸೆತದಲ್ಲಿ ತೃತೀಯ, ಚೆನ್ನಮ್ಮ ರೋಣದ ತ್ರಿವಿಧ ಜಿಗಿತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ, ಬಾಲಕಿಯರ ಚೆಸ್‌ನಲ್ಲಿ ಪವಿತ್ರ ಸನ್ನಿಂಗಣ್ಣವರ ಪ್ರಥಮ, ಬಾಲಕರ ವಿಭಾಗದ ಚೆಸ್‌ನಲ್ಲಿ ಅಭಿಷೇಕ್ ಹಿರೇಮಠ ಹಾಗೂ ನವೀದ್ ಕರಡಿ ಪ್ರಥಮ, ಯೋಗಾಸನ ಸ್ಪರ್ಧೆಯಲ್ಲಿ ಶ್ರೀಕಾಂತ್ ಕಂಬಳಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಗುಂಪು ಆಟಗಳ ಕ್ರಾಸ್ ಕಂಟ್ರಿಯಲ್ಲಿ ಪಾರ್ವತಿ ಯಳವತ್ತಿ, ಪ್ರಗತಿ ಮಾಡಳ್ಳಿ ಹಾಗೂ ಗೌರಿ ಪರ್ವತಗೌಡರ ಪ್ರಥಮ ಸ್ಥಾನ ಪಡೆದಿದ್ದಾರೆ. ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಅಪೂರ್ವ ಹುದ್ದಾರ, ರಿಂಕು ಲಮಾಣಿ, ಭುವನೇಶ್ವರಿ ಚವರಡ್ಡಿ, ಭಾನುಪ್ರಿಯಾ ಮನಗೂಳಿ ಹಾಗೂ ಅನುಷಾ ಹೊನ್ನಾಯ್ಕರ್ ಪ್ರಥಮ, ಟೆನಿಕ್ವೆಟ್ ಸ್ಪರ್ಧೆಯಲ್ಲಿ ಗೌರಿ ಪರ್ವತಗೌಡರ, ಭಾನುಪ್ರಿಯಾ ಮನಗೂಳಿ, ಪಾರ್ವತಿ ಯಳವತ್ತಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್.ಆರ್. ನಾಗನೂರ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯರಾದ ಪ್ರಿಯಾ ಎಂ. ಪಾಟೀಲ, ಕ್ರೀಡಾ ಸಂಚಾಲಕರಾದ ಪ್ರಭು ಅಂಗಡಿ, ಚಂದ್ರಶೇಖರ ಸತರಡ್ಡಿ, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.