ರೋಡ್‌ ರೇಜ್‌-ಅಪಹರಣ ಪ್ರಕರಣ; ಪೂಜಾ ಖೇಡ್ಕರ್ ಕಾರು ಚಾಲಕ ಅರೆಸ್ಟ್‌

0
Spread the love

ಮುಂಬೈ:- ಟ್ರಕ್ ಡ್ರೈವರ್ ಕಿಡ್ನ್ಯಾಪ್‌ ಕೇಸ್‌ ಗೆ ಸಂಬಂಧಿಸಿದಂತೆ ಪೂಜಾ ಖೇಡ್ಕರ್ ಕಾರು ಚಾಲಕನನ್ನು ಇದೀಗ ಅರೆಸ್ಟ್‌ ಮಾಡಲಾಗಿದೆ.

Advertisement

22 ವರ್ಷದ ಪ್ರಹ್ಲಾದ್ ಕುಮಾರ್ ಅವರ ಕಾಂಕ್ರೀಟ್ ಮಿಕ್ಸರ್ ಟ್ರಕ್, ಖೇಡ್ಕರ್ ಅವರ ಕಾರಿನ ನಡುವೆ ಸಣ್ಣಪ್ರಮಾಣದ ಅಪಘಾತ‌ ಮುಲುಂಡ್ – ಐರೋಲಿ ರಸ್ತೆಯಲ್ಲಿ ನಡೆದಿತ್ತು. ಇದು ಚಾಲಕ ಹಾಗೂ ಕಾರಿನಲ್ಲಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಮತ್ತು ಅಂಗರಕ್ಷಕ ಪ್ರಫುಲ್ ಸಲುಂಖೆ ಕುಮಾರ್ ಸೇರಿ ಟ್ರಕ್ ಚಾಲಕನನ್ನು ಕಟ್ಟಿ ಹಾಕಿ ಅಪಹರಿಸಿದ್ದರು. ಬಳಿಕ ಆತನನ್ನು ಪುಣೆಯಲ್ಲಿರುವ ಬಂಗಲೆಗೆ ಕರೆದೊಯ್ದಿದ್ದರು.

ಟ್ರಕ್ ಮಾಲೀಕನ ದೂರಿನ ಆಧಾರದ ಮೇಲೆ, ರಬಾಲೆ ಪೊಲೀಸರು ಭಾನುವಾರ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 137(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಕಾರಿನ ಗುರುತು ಪತ್ತೆಹಚ್ಚಿ, ಖೇಡ್ಕರ್ ಬಂಗಲೆಗೆ ತೆರಳಿದ್ದರು. ಈ ವೇಳೆ
ಪೂಜಾ ಅವರ ತಾಯಿ ಪೊಲೀಸರಿಗೆ ಒಳಬರದಂತೆ ತಡೆದಿದ್ದರು. ಅಂತಿಮವಾಗಿ ಪೊಲೀಸರು ದಾಳಿ ನಡೆಸಿ ಟ್ರಕ್‌ ಚಾಲಕನನ್ನು ರಕ್ಷಿಸಿದ್ದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಖೇಡ್ಕರ್ ಅವರ ತಾಯಿಯ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಿದ್ದಾರೆ. ಅಲ್ಲದೇ ಚಾಲಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here