ಸೆ. 21ರಿಂದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರಿ ಉತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸೆ. 21ರಿಂದ ಅಕ್ಟೋಬರ್ 2ರವರೆಗೆ ಶರನ್ನವರಾತ್ರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ದುರ್ಗಾ ಪೂಜೆ, ವಿಶೇಷವಾದ ಹೋಮಗಳನ್ನು ಆಯೋಜಿಸಲಾಗಿದೆ.

Advertisement

ಪ್ರತಿದಿನ ಬೆಳಿಗ್ಗೆ 8.30 ಗಂಟೆಗೆ ಪೂಜೆ ಮತ್ತು ಹೋಮ ಕಾರ್ಯಕ್ರಮ, ಸಂಜೆ 4 ಗಂಟೆಗೆ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಾರಾಯಣ, ದೇವಿ ಸ್ತುತಿ, ಆರತಿ, ಭಜನೆ, ಮಹಾಮಂಗಳಾರತಿ, ಮಹಾಪ್ರಸಾದ ಜರುಗುವುದು.

ಸೆ. 21ರಂದು ಸಂಜೆ 4 ಗಂಟೆಗೆ ಶ್ರೀ ದುರ್ಗಾದೇವಿ ಮೂರ್ತಿಯ ಮೆರವಣಿಗೆಯು ಭೀಷ್ಮ ಕೆರೆಯ ಹತ್ತಿರವಿರುವ ಬನ್ನಿಕಟ್ಟೆಯಿಂದ ಆಶ್ರಮದವರೆಗೆ ಜರುಗುವುದು. ಸೆ. 22ರಂದು ಸಂಜೆ 6.30ರಿಂದ 7.30ರವರೆಗೆ ಕಾರಟಗಿಯ ಸಂತೋಷ್ ಶಿಂದೆ ಅವರಿಂದ ಆರಾತ್ರಿಕ ಮತ್ತು ಭಜನೆ ಜರುಗುವುದು. ಸ್ವಾಮಿ ಜಗನ್ನಾಥಾನಂದ, ಹರಿಹರದ ಸ್ವಾಮಿ ಶಾರದೇಶಾನಂದ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಮನಗೂಳಿಯ ಶ್ರೀ ವಿವೇಕಾನಂದ ಸೇವಾ ಕೇಂದ್ರದ ಮೋಕ್ಷಪ್ರಾಣ ಮಾತಾಜಿಯವರು ಉದ್ಘಾಟನೆ ಮಾಡುವರು.

ಸೆ. 23ರಂದು ಸಂಜೆ 7.30 ಗಂಟೆಗೆ ಮಾದಿಹಳ್ಳಿ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಧರ್ಮವೃತಾನಂದ ಶ್ರೀಗಳು ದೇವಿ ಆರಾಧನೆ ಮಹತ್ವದ ಕುರಿತು ಉಪನ್ಯಾಸ ನೀಡುವರು. ಸೆ. 24ರಂದು ಸಂಜೆ 7 ಗಂಟೆಗೆ ಕುಮಾರಿ ಶರ್ವರಿ ಅವರಿಂದ ರೂಪಕ, ನಂತರ ಸ್ವಾಮಿ ಜಗನ್ನಾಥಾನಂದ ಅವರಿಂದ ಉಪನ್ಯಾಸ ಜರುಗುವುದು. ಸೆ. 25ರಂದು ಸಂಜೆ 7.30ಕ್ಕೆ ಆರ್. ರಾಮಣ್ಣ ಶೋಡಷ ಸಂಸ್ಕಾರಗಳ ಕುರಿತು ಉಪನ್ಯಾಸ ನೀಡುವರು.

ಸೆ. 26ರಂದು ಸಂಜೆ 7 ಗಂಟೆಗೆ ಈಶ್ವರದಾಸ ಯಲ್ಲಾಪುರ ಅವರಿಂದ ಹರಿಕಥೆ ಜರುಗುವುದು. ಸೆ. 27ರಂದು ಸಂಜೆ 7 ಗಂಟೆಗೆ ಲಕ್ಷ್ಮಿದೇವಿ ಬುಳ್ಳಾ ಅವರಿಂದ ಗಿಟಾರ್ ವಾದನ ಜರುಗುವುದು. ಸೆ. 28ರಂದು ಸಂಜೆ 7 ಗಂಟೆಗೆ ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಮಾತಾ ತೇಜೋಮಯಿ ಅವರಿಂದ ಭಜನೆ ಮತ್ತು ಉಪನ್ಯಾಸ ಜರುಗುವುದು. ಅಂದು ಬೆಳಿಗ್ಗೆ 10.30 ಗಂಟೆಗೆ ಡಾ. ತೋಟಪ್ಪ ಹಲಗತ್ತಿ ಹಾಗೂ ಡಾ. ರಮೇಶ ಮಾಯಪ್ಪನವರು ಅವರಿಂದ ಆರೋಗ್ಯ ಶಿಬಿರ ಜರುಗುವುದು. ಸೆ. 29ರಂದು ಸಂಜೆ 7 ಗಂಟೆಗೆ ಚಿಕ್ಕಟ್ಟಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.

ಈ ಎಲ್ಲ ಕಾರ್ಯಕ್ರಮಗಳಿಗೆ ಸದ್ಭಕ್ತರು ಸಹಕಾರ ನೀಡಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪೂಜ್ಯಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 30ರಂದು ಸಂಜೆ 7 ಗಂಟೆಗೆ ಗದುಗಿನ ನಿಮಿಷಾಂಬಾ ಜ್ಯೋತಿಶ್ರೀ ನೃತ್ಯ ಅಕಾಡೆಮಿ ಅವರಿಂದ ಭರತನಾಟ್ಯ ಮತ್ತು ನೃತ್ಯ ರೂಪಕ ಜರುಗುವುದು. ಅಕ್ಟೋಬರ್ 1ರಂದು ಸಂಜೆ 6.30 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಕಾರ್ಯಕ್ರಮದಲ್ಲಿ ಸ್ವಾಮಿ ಸುಮೇದಾನಂದ ಅವರಿಂದ ಆರಾತ್ರಿಕ ಮತ್ತು ಭಜನೆ ಜರುಗುವುದು. ಗದುಗಿನ ಸ್ವಾಮಿ ಜಗನ್ನಾಥಾನಂದರು, ರಾಣೆಬೆನ್ನೂರಿನ ಸ್ವಾಮಿ ಪ್ರಕಾಶಾನಂದ, ಹುಲಕೋಟಿ ಮತ್ತು ಮನಗೂಳಿಯ ಸ್ವಾಮಿ ಶಿವಪ್ರಿಯಾನಂದ ಅವರು ಸಾನ್ನಿಧ್ಯ ವಹಿಸುವರು. ಅ. 2ರಂದು ಸಂಜೆ 4 ಗಂಟೆಗೆ ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಜರುಗುವುದು.


Spread the love

LEAVE A REPLY

Please enter your comment!
Please enter your name here