Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಕರೆಂಟ್ ಇರಲ್ಲ!

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

Advertisement

ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಕೂಡಲಸಂಗಮ ಪೀಠಕ್ಕೆ ಬಿತ್ತು ಬೀಗ, ಬೇಸರದಲ್ಲಿ ಶ್ರೀಗಳು ಹೇಳಿದ್ದೇನು?

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತುರ್ತು ನಿರ್ವಹಣಾ ಕಾಮಗಾರಿ ಘೋಷಿಸಿರುವುದರಿಂದ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅದರಂತೆ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಸೆಪ್ಟೆಂಬರ್ 22 ಮತ್ತು 23ರಂದು ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಸೋಮವಾರ ಎಲ್ಲೆಲ್ಲಿ ಪವರ್ ಕಟ್?

ನಾಮಧಾರಿ, ಹೆಗಡೆ ನಗರ, ಉಗ್ರಹಳ್ಳಿ, ಮಾಯಗಾನಹಳ್ಳಿ, ಎಂ.ಬಿ. ಲೇಔಟ್, ಬಿ.ಸಿ. ಲೇಔಟ್, ಕಾಂಚನ ಲೇಔಟ್, ಪಾದರಹಳ್ಳಿ, ಚನ್ನಸಂದ್ರ, ಮದನಪುರ, ಯಶವಂತಪುರ, ಫ್ರೇಜರ್ ಟೌನ್, ಹಲಸೂರು, ಮಲ್ಲೇಶ್ವರಂ, ಗಾಂಧಿನಗರ, ಅತ್ತಿಗುಪ್ಪೆ, ಚಾಮರಾಜಪೇಟೆ, ಲಿಂಗರಾಜಪುರ, ಕೆಂಪಾಪುರ, ವಿನಾಯಕ ನಗರ.

ಟ್ರಿನಿಟಿ, ಬೈಯಪ್ಪನಹಳ್ಳಿ, ಶಾಂತಿನಗರ, ಜಯಮಹಲ್, ಮಾರತ್ತಹಳ್ಳಿ, ಕೋಗಿಲು, ಬಿಡಿಎ ಲೇಔಟ್, ರಾಜನಗರ, ಬಾಗಲೂರು, ರಾಜನಗರ ಬಡಾವಣೆ, ಬಾಗಲೂರು ಲೇಔಟ್, ಅರಮನೆ ನಗರ, ದೊಡ್ಡಕಲಸಂದ್ರ, ಹನುಮಂತಪುರ, ಅಟ್ಟೂರು, ಜಗನಾಥಪುರ, ನಿವಾರ, ಲೆಬ್ಬೆಟ್, ಅಗ್ನಿನಗರ, ಬಿ.ವಿ.ಗುಡಿಪಾಲ, ಅಂಬೇಡ್ಕರ್ ನಗರ, ಬಿ.ಬಿ.ಪಾಳ್ಯ, ಹೊಸಹಳ್ಳಿ, ಗುಬ್ಬಿ ಗೇಟ್, ರಿಂಗ್ ರಸ್ತೆ, ಹಾರೋಹಳ್ಳಿ, ಹೊನ್ನೇಮನಹಳ್ಳಿ, ಹೆಬ್ಬಾಳ, ಕುಪ್ಪೂರು, ಡಿ.ಎಂ. ಪಾಳ್ಯ, ಪಿಎನ್ ಆರ್ ಪಾಳ್ಯ, ನರಸಾಪುರ, ಕೆ.ಜಿ. ಪಾಳ್ಯ, ಭಜಂತ್ರಿ ಪಾಳ್ಯದಲ್ಲಿ ಇಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್​​ ಕಡಿತವಾಗಲಿದೆ.

ಮಂಗಳವಾರ ಪವರ್ ಕಟ್?

ಯಲ್ಲಾರ್ ಬಂಡೆ 66/11 ಕೆವಿ ಉಪಕೇಂದ್ರ (ಉತ್ತರ) ದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡ ಹಿನ್ನಲೆ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.

ಕಾವಲ್ ಬೈರಸಂದ್ರ, ಎಲ್.ಆರ್.ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ಮೆಡಿಕಲ್ ಕಾಲೇಜು, ಸುಲ್ತಾನ್ ಪಾಳ್ಯ, ರಂಕಾನಗರ, ಕನಕನಗರ, ಕೆಎಚ್‌ಬಿ ಮುಖ್ಯರಸ್ತೆ, ವಿ. ನಾಗೇನಹಳ್ಳಿ, ಭುವನೇಶ್ವರಿ ನಗರ, ಕುಶಾಲ್‌ನಗರ, ಪೆರಿಯಾ‌ರ್ ನಗರ, ಮೋದಿ ಉದ್ಯಾನ, ಮೋದಿ ರಸ್ತೆ, ಮುನಿವೀರಪ್ಪ ಲೇಔಟ್, ದೊಡ್ಡಣ್ಣ ನಗರ, ಉಪ್ಪಿನ ಮಂಡಿ, ಸಕ್ಕರೆ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.


Spread the love

LEAVE A REPLY

Please enter your comment!
Please enter your name here