ಕಾಂತಾರ ಪ್ರೀಕ್ವೆಲ್ ಟ್ರೈಲರ್ ನಲ್ಲಿ ಅಬ್ಬರಿಸಿದ ರಿಷಬ್‌ ಶೆಟ್ಟಿ

0
Spread the love

ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ರಿಲೀಸ್‌ ಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಇದಕ್ಕೂ ಮುನ್ನ ಇಂದು ಚಿತ್ರತಂಡ ಅದ್ದೂರಿಯಾಗಿ ಟ್ರೈಲರ್‌ ರಿಲೀಸ್‌ ಮಾಡಿದ್ದು ಟ್ರೈಲರ್‌ ನೋಡಿ ಪ್ರತಿಯೊಬ್ಬರು ಥ್ರಿಲ್‌ ಆಗಿದ್ದಾರೆ. ಸಿನಿಮಾ ರಿಲೀಸ್‌ ಗೆ ಎದುರು ನೋಡ್ತಿದ್ದಾರೆ.

Advertisement

2022ರ ಸೆಪ್ಟೆಂಬರ್ 30ರಂದು ಕಾಂತಾರ ಸಿನಿಮಾ ರಿಲೀಸ್‌ ಆಗಿತ್ತು. ಇದೀಗ ಮೂರು ವರ್ಷಕ್ಕೆ ಸರಿಯಾಗಿ ಪ್ರೀಕ್ವೆಲ್ ರಿಲೀಸ್‌ ಗೆ ರೆಡಿಯಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಇಷ್ಟು ದಿನ ಚಿತ್ರದ ಪೋಸ್ಟರ್ ಹಾಗೂ ಮೇಕಿಂಗ್ ವಿಡಿಯೋ ಮಾತ್ರ ರಿಲೀಸ್ ಆಗಿದ್ದವು. ಈಗ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಕಾಂತಾರ ದೃಶ್ಯ ವೈಭವ ನೋಡಿ ಪ್ರತಿಯೊಬ್ಬರು ಸಖತ್‌ ಖುಷಿಯಾಗಿದ್ದಾರೆ.

ಕಾಂತಾರ ಎಲ್ಲಿಗೆ ಎಂಡ್ ಆಗಿತ್ತೋ ಅಲ್ಲಿಂದಲೇ ಕಾಂತಾರ ಚಾಪ್ಟರ್ ಒನ್ ಶುರು ಆಗುತ್ತಿದೆ. ಚಿತ್ರದ ಟ್ರೈಲರ್ ಅಲ್ಲಿಯೇ ಈ ಒಂದು ವಿಷಯ ರಿವೀಲ್ ಆಗುತ್ತದೆ. ಇಲ್ಲೊಂದು ಕಾಂತಾರ ಲೋಕವೂ ಇದೆ. ಈ ಲೋಕದಲ್ಲಿಇರೋದೆಲ್ಲ ಕಾಡು ಜನರೇ ಅನಿಸೋ ಹಾಗೆ ಹೊಸ ಲೋಕವನ್ನ ಸೃಷ್ಟಿ ಮಾಡಿದ್ದಾರೆ. ಆದರೆ, ಇದರಲ್ಲಿ ಶಿವನ ರೂಪವೂ ಇದೆ. ಅದು ರಿಷಬ್ ಶೆಟ್ರು ಅನ್ನೋದು ಕೂಡ ಇದೇ ಟ್ರೈಲರ್ ಅಲ್ಲಿ ಗೊತ್ತಾಗುತ್ತಿದೆ.

ರುಕ್ಮಿಣಿ ವಸಂತ್ ಮತ್ತು ರಿಷಬ್ ಶೆಟ್ಟಿ ಜೊತೆಯಾಗಿರುವ ದೃಶ್ಯಗಳಿದ್ದು ರುಕ್ಮಿಣಿ ವಸಂತ್ ರಾಣಿಯಾಗಿ ಕಂಗೊಳಿಸಿದ್ದಾರೆ. ರಿಷಬ್ ಶೆಟ್ರ ಆ್ಯಕ್ನ್ ಸೀನ್ ಇಲ್ಲಿ ಅದ್ಭುತವಾಗಿಯೇ ಇವೆ. ಕಾಡು ಜನರ ನಾಯಕ ರೀತಿನೇ ಕಾಣುವ ರಿಷಬ್ ಶೆಟ್ರು ಇಲ್ಲಿ ಪರಮಶಿವನರೂಪವನ್ನು ತಾಳಿದ್ದಾರೆ.


Spread the love

LEAVE A REPLY

Please enter your comment!
Please enter your name here