ಇನ್ಪೋಸಿಸ್‌ ಮುಖ್ಯಸ್ಥೆ ಡಾ. ಸುಧಾಮೂರ್ತಿ ಯಾಮಾರಿಸಲು ಸೈಬರ್ ವಂಚಕರ ಯತ್ನ; ದೂರು ದಾಖಲು

0
Spread the love

ಬೆಂಗಳೂರು:- ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರಿಗೆ ಸೈಬರ್ ವಂಚನೆಗೆ ಯತ್ನಿಸಿದ್ದು, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸೆ.5 ರಂದು ಸುಧಾಮೂರ್ತಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ಹೇಳಿಕೊಂಡಿದ್ದ. ಬಳಿಕ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್‌ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ ಎಂದು ಹೇಳಿ ವೈಯಕ್ತಿಕ ಮಾಹಿತಿ ಪಡೆಯಲು ಸೈಬರ್ ಖದೀಮ ಯತ್ನಿಸಿದ್ದ. ಜೊತೆಗೆ ನಿಮ್ಮ ನಂಬರ್ ನಿಂದ ಅಶ್ಲೀಲ ವಿಡಿಯೋ ಕಳಿಸಲಾಗ್ತಿದೆ. ಅದನ್ನು ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದ.

ಕೂಡಲೇ ಟ್ರೂಕಾಲರ್ ನಲ್ಲಿ ಆ ನಂಬರ್ ಚೆಕ್ ಮಾಡಿದಾಗ ಟೆಲಿಕಾಂ ಡಿಪಾರ್ಟ್ಮೆಂಟ್ ಅಂತ ಬಂದಿದೆ. ಈ ವೇಳೆ ಡಾಕ್ಟರ್ ಸುಧಾಮೂರ್ತಿ ಅವರು ಸೈಬರ್ ವಂಚಕರ ಟ್ರ್ಯಾಪ್ ಗೆ ಒಳಗಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here