ಬೆಂಗಳೂರು: ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಆದೇಶ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ದರ್ಶನ್ ಪರ ವಕೀಲರು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದ ಬಳಿಕವೂ ಜೈಲಾಧಿಕಾರಿಗಳು ದರ್ಶನ್ಗೆ ಹೆಚ್ಚುವರಿ ದಿಂಬು, ಹಾಸಿಗೆ ಕೊಟ್ಟಿಲ್ಲ ಎಂದು ವಕೀಲರು ಆರೋಪ ಮಾಡಿದ್ದರು.
ಅದರಂತೆ ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆದೇಶವನ್ನು ಮುಂದೂಡಿಕೆ ಮಾಡಿದೆ. ಹೌದು ದರ್ಶನ್ಗೆ ಹೆಚ್ಚುವರಿ ದಿಂಬು, ಹಾಸಿಗೆ ಕೊಡುವ ಬಗ್ಗೆ 25 ನೇ ತಾರೀಖು ಆದೇಶ ಬರಲಿದೆ. ಈ ಸಂಬಂಧವಾಗಿ ಮತ್ತೊಮ್ಮ ಎಸ್ಪಿಪಿ ಹಾಗೂ ದರ್ಶನ್ ಲಾಯರ್ ನಡುವೆ ವಾದ ಪ್ರತಿವಾದ ನಡೆದಿತ್ತು.
ಇದೀಗ ಇದರ ಆದೇಶ 25ಕ್ಕೆ ಬರಲಿದೆ.ಇನ್ನೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ 17 ಆರೋಪಿಗಳ ಚಾರ್ಜ್ ಪ್ರೇಮ್ ಸಿದ್ಧತೆ ನಡೆಯುತ್ತಿದೆ. 25 ನೇ ತಾರೀಖು ಎಲ್ಲಾ 17 ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲು ಕೋರ್ಟ್ ಸೂಚನೆ ನೀಡಿದೆ. 7 ಆರೋಪಿಗಳನ್ನು ಜೈಲಿಯಿಂದ ಕೋರ್ಟ್ ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.