ಮಂಡ್ಯ:– ಜಿಲ್ಲೆ ಮದ್ದೂರು ತಾಲೂಕಿನ ತರೀಕೆರೆ ಗ್ರಾಮದ ಬಳಿ ವಿಳಾಸ ಕೇಳುವ ನೆಪದಲ್ಲಿ ಬಂದ ಖದೀಮರು ವೃದ್ದೆಯ ಚಿನ್ನದ ಸರ ಕದ್ದು ಎಸ್ಕೇಪ್ ಆಗಿರುವ ಘಟನೆ ಜರುಗಿದೆ.
Advertisement
ಹಾಡುಹಗಲೇ ಜಯಲಕ್ಷ್ಮಮ್ಮ ಎಂಬ ವೃದ್ಧೆಯ ಸರ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿ ಗಳಿಂದ ಕೃತ್ಯ ನಡೆದಿದೆ. ಘಟನೆಯಿಂದ ಸುತ್ತಮುತ್ತಲ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೂಡಲೇ ಸ್ಥಳಕ್ಕೆ ಮದ್ದೂರು ಸಿಪಿಐ ಸೇರಿ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.