ಕೊಲ್ಕತ್ತಾ:- ಪಶ್ಚಿಮ ಬಂಗಾಳದಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಏಳು ಮಂದಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಜಲಾವೃತ ಪ್ರದೇಶಗಳಲ್ಲಿ ವಿದ್ಯುತ್ ಆಘಾತದಿಂದ ಐದು ಜನರು ಸೇರಿ ಮಳೆಯಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ತುಂಬೆಲ್ಲ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿ, ವಾಹನ ಸವಾರರು ಪರದಾಡಿದ್ದಾರೆ. ಜೊತೆಗೆ ಉಪನಗರ ರೈಲು ಮತ್ತು ಮೆಟ್ರೋ ಸೇವೆಗಳಿಗೂ ಅಡ್ಡಿಯಾಗಿದೆ. ಮಳೆ ನೀರು ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ಕೋಲ್ಕತ್ತಾದ ದಕ್ಷಿಣ ಮತ್ತು ಪೂರ್ವ ಭಾಗಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಗರಿಯಾ ಕಾಮದಹರಿಯಲ್ಲಿ 332 ಮಿಮೀ ಮಳೆಯಾಗಿದೆ. ಜೋಧ್ಪುರ ಪಾರ್ಕ್ನಲ್ಲಿ 285 ಮಿ.ಮೀ, ಕಾಳಿಘಾಟ್ನಲ್ಲಿ 280 ಮಿ.ಮೀ, ಟಾಪ್ಸಿಯಾದಲ್ಲಿ 275 ಮಿ.ಮೀ, ಬ್ಯಾಲಿಗಂಜ್ನಲ್ಲಿ 264 ಮಿ.ಮೀ ಮತ್ತು ಉತ್ತರ ಕೋಲ್ಕತ್ತಾದ ಥಂಟಾನಿಯಾದಲ್ಲಿ 195 ಮಿ.ಮೀ ಮಳೆಯಾಗಿದೆ ಕೋಲ್ಕತ್ತಾ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ.


