ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಎಸ್.ಎಸ್.ಕೆ ದಸರಾ ಉತ್ಸವ ಸಮಿತಿ ಶ್ರೀ ಜಗದಂಬಾ ಮಹಿಳಾ ಮಂಡಳಿದ ವತಿಯಿಂದ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಎಸ್.ಎಸ್.ಕೆ ಸಮಾಜದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಬೆಂಕಿ ಇಲ್ಲದೆ ಅಡುಗೆ, ಒಡಪುಗಳನ್ನು ಹೇಳುವುದು, ಟ್ವಿನ್ ಮ್ಯಾಚಿಂಗ್ ಸ್ಪರ್ಧೆ ನಡೆಯಲಿದ್ದು, ನಂತರ ಮಹಿಳಾ ಮಂಡಳದವರಿಗಾಗಿ ಪಾಸಿಂಗ್ ದ ಬಾಲ್ ಸ್ಪರ್ಧೆ ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಗದಂಬಾ ಮಹಿಳಾ ಮಂಡಳದ ಅಧ್ಯಕ್ಷರಾದ ಸರೋಜಾ ಎಚ್.ಕಬಾಡಿ ವಹಿಸುವರು. ಮುಖ್ಯ ಅತಿಥಿಗಳಾಗಿ ಗೀತಾ ಎ.ಕಬಾಡಿ, ಲಕ್ಷ್ಮಿ ವಿ.ಮೇರವಾಡೆ ಆಗಮಿಸುವರು. ಈ ಸಂದರ್ಭದಲ್ಲಿ ಮಹಿಳಾ ಮಂಡಳದ ಸಹಕಾರ್ಯದರ್ಶಿ ಸುರೇಖಾ ಎಚ್.ಕಬಾಡಿ, ಮಹಿಳಾ ಮಂಡಳದ ಮಾಜಿ ಅಧ್ಯಕ್ಷರಾದ ಗಂಗೂಬಾಯಿ ಬಿ.ಜಿತೂರಿ, ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಲೋಕನಾಥ ಕಬಾಡಿ, 2025ರ ದಸರಾ ಉತ್ಸವದ ಚೇರಮನ್ ಸೋಮಶೇಖರ ಮೇರವಾಡೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.



