ವಿಜಯಸಾಕ್ಷಿ ಸುದ್ದಿ, ಗದಗ: ಆರ್ಯವೈಶ್ಯ ಸಮಾಜ ವತಿಯಿಂದ ನಗರದ ನಗರೇಶ್ವರ ದೇವಸ್ಥಾನದಲ್ಲಿ ಅಯೋಧ್ಯಾ ರಾಮ ಮಂದಿರ ಮಾದರಿ ಪ್ರದರ್ಶನ ನಡೆಯುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಆರ್ಯವೈಶ್ಯ ಸಮಾಜದ ಎನ್. ರಾಮರಾವ್ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯವೈಶ್ಯ ಸಮಾಜದ 50ನೇ ವರ್ಷದ ಮಹೋತ್ಸವ ಹಿನ್ನೆಲೆಯಲ್ಲಿ ಈ ಪ್ರದರ್ಶನ ನಡೆಯುತ್ತಿದ್ದು, ದೇಶಾದ್ಯಂತ 2022ರಿಂದ ಪ್ರದರ್ಶನ ನಡೆಯುತ್ತಿದೆ. ಸಾಕ್ಷಾತ್ ರಾಮ ಮಂದಿರದಂತೆಯೇ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಕೇತ ಹೆಬಸೂರು, ಕೊದಂಡರಾಮ ಕುಷ್ಠಗಿ, ರಾಘವೇಂದ್ರ ಕಾಲವಾಡ, ವೆಂಕಟೇಶ ಬೆಟಗೇರಿ, ಬಾಲಾಜಿ ಕುಷ್ಠಗಿ, ಕೃಷ್ಣ ಜನಾದ್ರಿ, ವೆಂಕಟೇಶ ಮುಂಡರಗಿ, ವೆಂಕಟೇಶ ಮುತಗಿ ಮುಂತಾದವರಿದ್ದರು.



