ವಿಜಯಸಾಕ್ಷಿ ಸುದ್ದಿ, ಗದಗ: ನಾಡ ಹಬ್ಬ ದಸರಾವನ್ನು ಮೈಸೂರು, ಮಂಗಳೂರು ನಂತರ ಗದುಗಿನಲ್ಲಿ ಎಸ್‌ಎಸ್‌ಕೆ ಸಮಾಜದಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ದತ್ತಾ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕಿರಣ ಭೂಮಾ ಹೇಳಿದರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ–2025ರ 2ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಸ್‌ಎಸ್‌ಕೆ ಸಮಾಜ ಬಾಂಧವರ ಶಿಸ್ತು, ಸಂಯಮ, ಬದ್ಧತೆ, ಒಗ್ಗಟ್ಟು ನೋಡಿದರೆ ಹೆಮ್ಮೆ ಎನಿಸುತ್ತದೆ. ಅಧುನಿಕ ಯುಗದಲ್ಲಿ ಮೊಬೈಲ್ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ಜನರು ಮಾರುಹೋಗುತ್ತಿರುವ ಇಂದಿನ ದಿನಗಳಲ್ಲಿ ಎಸ್‌ಎಸ್‌ಕೆ ಸಮಾಜದವರು ಹಿಂದುತ್ವ ರಕ್ಷಣೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವಲ್ಲಿ ಪ್ರಮುಖರಾಗಿದ್ದಾರೆ ಎಂದು ಹೇಳಿದರು.
ದತ್ತಾ ಡೆವಲಪರ್ಸ್ ನಿರ್ದೇಶಕ ಎಸ್.ಎಚ್. ಶಿವನಗೌಡ್ರ ಸಾಂದರ್ಭಿಕವಾಗಿ ಮಾತನಾಡಿದರು. ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ರವಿ ಶಿದ್ಲಿಂಗ, ದಸರಾ ಕಮಿಟಿ ಚೆರ್‌ಮನ್ ಅನಿಲ್ ಖಟವಟೆ ಉಪಸ್ಥಿತರಿದ್ದರು.
ಪಂಚ ಕಮಿಟಿ ಸದಸ್ಯರಾದ ಎನ್.ಆರ್. ಖಟವಟೆ, ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಬಲರಾಮ ಬಸವಾ, ಪರಶುರಾಮ ಬದಿ, ವಿಷ್ಣುಸಾ ಶಿದ್ಲಿಂಗ, ಮಾರುತಿ ಪವಾರ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ, ಮೋತಿಲಾಲಸಾ ಪೂಜಾರಿ, ವಿನೋದ ಬಾಂಡಗೆ, ತರುಣ ಸಂಘದ ವಿಶ್ವನಾಥಸಾ ಸೂಳಂಕಿ, ರಾಘು ಬಾರಡ, ಶ್ರೀಕಾಂತ ಬಾಕಳೆ, ಮಾಧು ಬದಿ, ನಾಗರಾಜ ಖೋಡೆ, ಶ್ರೀನಿವಾಸ ಬಾಂಡಗೆ, ಸುಧೀರ ಕಾಟಿಗರ, ಮಹಿಳಾ ಮಂಡಳದ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ, ಗೀತಾಬಾಯಿ ಹಬೀಬ ಮುಂತಾದವರು ಉಪಸ್ಥಿತರಿದ್ದರು.
ಶ್ರೀನಿವಾಸ ಬಾಂಡಗೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಗಂಗಾಧರ ಹಬೀಬ ವಂದಿಸಿದರು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ (ರಾಜು) ಗುಡಿಮನಿ ಮಾತನಾಡಿ, ಎಸ್‌ಎಸ್‌ಕೆ ಸಮಾಜದವರು ಶ್ರಮಜೀವಿಗಳು. ಜೀವನದಲ್ಲಿ ಕೇವಲ ಹಣ ಗಳಿಸುವುದು ಮುಖ್ಯವಲ್ಲ. ದಾನ–ಧರ್ಮಗಳನ್ನು ಮಾಡುವ ಮೂಲಕ ಹಿರಿಯ ಜೀವಿಗಳು ಹಾಗೂ ಕುಟುಂಬದವರೊಡನೆ ಪ್ರೀತಿ–ವಾತ್ಸಲ್ಯದಿಂದ ಬಾಳಬೇಕು ಎಂದು ಹೇಳಿದರು.